ಮೈಸೂರು: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಮೈಸೂರು ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣದ 7ನೇ ಆರೋಪಿಯನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನಲ್ಲಿ ಬೀಡುಬಿಟ್ಟಿದ್ದ ಮೈಸೂರು ಪೊಲೀಸರ ತಂಡ ಈ ಮೊದಲು ಬಂಧಿಸಿದ್ದ ಆರೋಪಿಗಳು ಒದಗಿಸಿದ ಮಾಹಿತಿ ಆಧರಿಸಿ 7ನೇ ಆರೋಪಿಯನ್ನು ಸೆರೆಹಿಡಿದಿದೆ. ಆರೋಪಿಯನ್ನು ತಮಿಳುನಾಡಿನಿಂದ ಮೈಸೂರಿಗೆ ಇಂದು (ಸೆಪ್ಟೆಂಬರ್ 7) ರಾತ್ರಿ ಕರೆತರಲಾಗುವುದು ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಆಗಸ್ಟ್ 24ರಂದು ಸಂಜೆ ಮೈಸೂರಿನ ಲೀಲಾದ್ರಿ ಗುಡ್ಡ ಪ್ರದೇಶದಲ್ಲಿ ನಡೆದಿದ್ದ ವಿದ್ಯಾರ್ಥಿನಿ ಮೇಲಿನ ಗ್ಯಾಂಗ್ ರೇಪ್ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಪ್ರಕರಣ ಸಂಬಂಧ ಈಗಾಗಲೇ ಪೊಲೀಸರು ತಮಿಳುನಾಡು ಮೂಲದ 6 ಆರೋಪಿಗಳನ್ನು ಬಂಧಿಸಿದ್ದರು. ಬಂಧಿತರಲ್ಲಿ ಓರ್ವ ಬಾಲಾರೋಪಿಯಾಗಿದ್ದು, ಆರೋಪಿಗಳು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದರು. ಸದ್ಯ ತಲೆಮರೆಸಿಕೊಂಡಿದ್ದ 7ನೇ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.
PublicNext
07/09/2021 06:17 pm