ವಿಜಯನಗರ: ಈಗಲೇ ಪಿಎಚ್‌ಡಿ ಮಾಡುವುದು ಬೇಡ ಎಂದಿದ್ದಕ್ಕೆ ವಿದ್ಯಾರ್ಥಿನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಕೊಟ್ಟೂರು ತಾಲೂಕಿನ ಉಜ್ಜನಿ ಗ್ರಾಮದಲ್ಲಿ ನಡೆದಿದೆ.
ಉಜ್ಜನಿ ಗ್ರಾಮದ ನಿವಾಸಿ ಪೂಜಾ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಪೂಜಾ ಇತ್ತೀಚೆಗಷ್ಟೇ ಎಂಎಸ್ಸಿ ಮುಗಿಸಿದ್ದಳು. ಈಗ ಪಿಎಚ್‌ಡಿ ವ್ಯಾಸಾಂಗ ಮಾಡಬೇಕು ಎಂದು ಪೋಷಕರ ಬಳಿ ಹೇಳಿಕೊಂಡಿದ್ದಳು. ಆದರೆ ಪೋಷಕರು ಆರ್ಥಿಕ ಸಂಕಷ್ಟವಿದೆ, ಈಗ ಪಿಎಚ್‌ಡಿ ಮಾಡುವುದು ಬೇಡ ಎಂದು ತಿಳಿ ಹೇಳಿದ್ದರು. ಇದರಿಂದಾಗಿ ಪೂಜಾ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸಂಬಂಧ ಕೊಟ್ಟೂರು ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
PublicNext
01/09/2021 08:27 pm