ಮೈಸೂರು : ಮೈಸೂರಿನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್ ಮಾಡಲಾಗದ ಆರೋಪಿಗಳಿಂದ ದಿನಕ್ಕೊಂದು ಭಯಾನಕ ಸತ್ಯ ಹೊರಬರುತ್ತಿದೆ. ಬಂಧಿತ ಐವರು ಆರೋಪಿಗಳ ಪೈಕಿ ಓರ್ವ ಜೇಬಿನಲ್ಲಿ ಸದಾ ಕಾಂಡೋಮ್ ಇಟ್ಟುಕೊಂಡೇ ತಿರುಗಾಡುತ್ತಿದ್ದ ಎಂಬ ಸ್ಫೋಟಕ ಅಂಶ ಬಯಲಾಗಿದೆ. ಈ ಗ್ಯಾಂಗ್ ನಲ್ಲಿ ಈತನೇ ನಟೋರಿಯಸ್ ಕಾಮುಕ..
ಯಾವಾಗಲೂ ಕಾಂಡೋಮ್ ಅನ್ನು ಜೇಬಿನಲ್ಲಿ ಇಟ್ಟುಕೊಳ್ತಿದ್ದ ಆರೋಪಿ, ಹಗಲಿನಲ್ಲಿ ನಿದ್ರಿಸುತ್ತಿದ್ದನಂತೆ. ಈ ಗ್ಯಾಂಗ್ ನ ಉಳಿದ ಸದಸ್ಯರು ಹೆಚ್ಚಾಗಿ ಹಣ ಮತ್ತು ಆಭರಣಕ್ಕೆ ಬೇಡಿಕೆ ಇಡುತ್ತಿದ್ದರೆ, ಈತನಿಗೆ ಮಾತ್ರ ಸೆಕ್ಸ್ ಮುಖ್ಯವಾಗಿತ್ತಂತೆ. ಸಂಜೆಯಾಗುತ್ತಿದ್ದಂತೆ ನಿರ್ಜನ ಪ್ರದೇಶದಲ್ಲಿ ಕಳ್ಳತನ, ದರೋಡೆಗೆ ಹೊಂಚು ಹಾಕುತ್ತಾ ಕುಳಿತಿರುತ್ತಿದ್ದ ಈ ಗ್ಯಾಂಗ್, ಮಹಿಳೆಯರು-ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯವನ್ನು ಎಸಗಿದ್ದಾರೆ.
ಮೈಸೂರಿನಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಲಲಿತಾದ್ರಿಪುರ ನಿರ್ಜನ ಪ್ರದೇಶದಲ್ಲಿ ಬಿಯರ್ ಬಾಟಲಿ, ಬಳಸಿ ಬಿಸಾಡಿದ ಕಾಂಡೋಮ್ ಸಿಕ್ಕಿದ್ದು, ಈ ಗ್ಯಾಂಗ್ ನ ಕೃತ್ಯಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.
PublicNext
30/08/2021 07:45 pm