ಮಂಗಳೂರು: ಅನ್ಯಕೋಮಿನ ವಿದ್ಯಾರ್ಥಿಗಳ ಜೊತೆ ಹಿಂದೂ ಯುವತಿಯರು ತಿರುಗಾಟ ನಡೆಸ್ತಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ
ಹಿಂದೂ ಜಾಗರಣ ವೇದಿಯ ಕಾರ್ಯಕರ್ತರ ತಂಡ ದಾಳಿ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ
ಕಾರಿಂಜ ದೇವಸ್ಥಾನ ಬಳಿ ನಡೆದಿದೆ. ಇವರೆಲ್ಲಾ ಮಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಎನ್ನಲಾಗಿದೆ.
ಕಾರಿಂಜ ದೇವಸ್ಥಾನದ ಪಕ್ಕದಲ್ಲಿರುವ ನಿರ್ಜನ ಪ್ರದೇಶದಲ್ಲಿ ಅನ್ಯಕೋಮಿನ 3 ವಿದ್ಯಾರ್ಥಿಗಳು ಹಾಗೂ ಒರ್ವ ಯುವತಿ ಸೇರಿದಂತೆ ಇಬ್ಬರು ಹಿಂದೂ ಯುವತಿಯರು ಜೊತೆಗಿದ್ದು ಸುತ್ತಾಟ ನಡೆಸುತ್ತಿದ್ದನ್ನು ಕಂಡ ಸ್ಥಳೀಯರು ಹಿಂದೂ ಸಂಘಟನೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯ ಪ್ರವೃತ್ತರಾದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ದಾಳಿ ನಡೆಸಿ ಜೋಡಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
PublicNext
26/08/2021 10:54 pm