ಯಾದಗಿರಿ: ಯಾರೋ ಕಿಡಿಗೇಡಿಗಳು ಬುದ್ಧನ ಪ್ರತಿಮೆ ಧ್ವಂಸಗೊಳಿಸಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರದ ಅಂಬೇಡ್ಕರ್ ನಗರದಲ್ಲಿ ನಡೆದಿದೆ.
ಬುದ್ಧ ವಿಹಾರದಲ್ಲಿ ಪ್ರತಿಷ್ಠಾಪಿಸಿದ ಬುದ್ಧನ ಮೂರ್ತಿ ಧ್ವಂಸಗೊಳಿಸಿ ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಕಳೆದ 8 ದಿನಗಳ ಹಿಂದೆ ನಡೆದ ಈ ಕೃತ್ಯ ನಡೆದಿದ್ದು, ನಿನ್ನೆ ತಡವಾಗಿ ಬೆಳಕಿಗೆ ಬಂದಿದೆ. ಖಾಸಗಿ ಸರ್ವೆ ನಂಬರ್ 31ರಲ್ಲಿ ಗೌತಮ ಬುದ್ಧನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು.
ಇನ್ನು ಖಾಸಗಿ ಜಾಗದ ಮಾಲೀಕರ ಜೊತೆ ಆಸ್ತಿ ವಿವಾದ ಇದ್ದು, ಮಾಲೀಕರ ಮೇಲೆ ಹಾಗೂ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ ಕಿಡಿಗೇಡಿಗಳ ಮೇಲೆ ಅನುಮಾನ ವ್ಯಕ್ತಪಡಿಸಲಾಗಿದೆ. ಸ್ಥಳಕ್ಕೆ ಯಾದಗಿರಿ ಎಸ್‌ಪಿ ಡಾ.ಸಿ.ಬಿ.ವೇದಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಸುರಪುರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.
ಇನ್ನು ಗೌತಮ ಬುದ್ಧನ ಮೂರ್ತಿ ಧ್ವಂಸಗೊಳಿಸಿದ ಕಿಡಿಗೇಡಿಗಳನ್ನು ಬಂಧನ ಮಾಡುವಂತೆ ದಲಿತ ಮುಖಂಡರ ಒತ್ತಾಯಿಸಿದ್ದಾರೆ.
-ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
PublicNext
25/08/2021 12:43 pm