ಬೆಂಗಳೂರು: ಸಾರ್ವಜನಿಕರು ಟೋಯಿಂಗ್ ಸಿಬ್ಬಂದಿಯೊಂದಿಗೆ ಜಗಳ ಮಾಡಿ ಹಲ್ಲೆ ನಡೆಸಿರುವ ಘಟನೆ ಇಂದಿರಾನಗರ ಮೆಟ್ರೋ ಸ್ಟೇಷನ್ ಬಳಿ ನಡೆದಿದೆ. ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದ ವಾಹನಗಳನ್ನ ಕೊಂಡೊಯ್ಯಲು ಟೋಯಿಂಗ್ ಸಿಬ್ಬಂದಿ ಮುಂದಾದಾಗ ಸಾರ್ವಜನಿಕರು ಹಲ್ಲೆ ಮಾಡಿದ್ದಾರೆ.
ಪಾರ್ಕಿಂಗ್ನಲ್ಲಿದ್ದ ವಾಹನಗಳನ್ನ ಕೊಂಡೊಯ್ಯಲು ಟೋಯಿಂಗ್ ಸಿಬ್ಬಂದಿ ಮುಂದಾದ ಕೂಡಲೇ ಜನರು ತಡೆದು ಬಿಡುವುದಿಲ್ಲ ಅಂತಾ ಪಟ್ಟುಹಿಡಿದಿದ್ದಾರೆ. ಅಲ್ಲದೇ, ಏಕಾಏಕಿ ಸಂಚಾರಿ ಪೊಲೀಸರ ವಿರುದ್ಧ ಮುಗಿಬಿದ್ದಿದ್ದಾರೆ. ಘಟನೆ ಸಂಬಂಧ ಇಂದಿರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
20/08/2021 09:59 am