ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾಕ್‌ನಲ್ಲಿ ಪ್ರಥಮ ಸಿಖ್ ಚಕ್ರವರ್ತಿ ರಣಜಿತ್ ಸಿಂಗ್ ಪ್ರತಿಮೆ ಧ್ವಂಸ- ವಿಡಿಯೋ ವೈರಲ್

ಇಸ್ಲಾಮಾಬಾದ್: ಪ್ರಥಮ ಸಿಖ್ ಚಕ್ರವರ್ತಿ ಮಹಾರಾಜ ರಣಜಿತ್ ಸಿಂಗ್ ಅವರ ಅಶ್ವರೂಢ ಪ್ರತಿಮೆಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿರುವ ಘಟನೆ ಪಾಕಿಸ್ತಾನದ ಲಾಹೋರ್‌ನಲ್ಲಿ ಇಂದು ನಡೆದಿದೆ.

ತೆಹ್ರೀಕ್-ಎ-ಲಬ್ಬಾಯಿಕ್ ಪಾಕಿಸ್ತಾನ ಎಂಬ ಸಂಘಟನೆಯು ಮಹಾರಾಜ ರಂಜಿತ್ ಸಿಂಗ್ ಪ್ರತಿಮೆಯನ್ನು ಧ್ವಂಸಗೊಳಿಸಿದೆ. ವಿಧ್ವಂಸಕ ಕೃತ್ಯದಲ್ಲಿ ತೊಡಗಿದ್ದ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ವಿಡಿಯೋವನ್ನು ಟ್ವೀಟ್ ಮಾಡಿರುವ ಪಾಕಿಸ್ತಾನದ ಸಚಿವ ಫವಾದ್ ಚೌಧರಿ, "ಅನಕ್ಷರಸ್ಥರ ಈ ಗುಂಪು ನಿಜವಾಗಿಯೂ ಪಾಕಿಸ್ತಾನದ ಪ್ರತಿಷ್ಠೆಗೆ ಅಪಾಯಕಾರಿ" ಎಂದು ಟ್ವೀಟ್ ಮಾಡಿದ್ದಾರೆ.

ಬಿಜೆಪಿ ನಾಯಕ ಶಲಭ್ ಮಣಿ ತ್ರಿಪಾಠಿ ಕೂಡ ವಿಡಿಯೋ ಟ್ವೀಟ್ ಮಾಡಿ, "ಸಿಖ್ಖರು ಮತ್ತು ಹಿಂದೂಗಳ ಮೇಲಿನ ದ್ವೇಷಕ್ಕೆ ಇಂತಹ ನಿರೀಕ್ಷೆ ಮಾಡಿರಲಿಲ್ಲ. ಮಹಾರಾಜ ರಂಜಿತ್ ಸಿಂಗ್, ಶೇರ್-ಇ-ಪಂಜಾಬ್ ಎಂದೇ ಪ್ರಸಿದ್ಧರಾಗಿದ್ದು, ಪಂಜಾಬ್ ಅನ್ನು ಒಂದು ಪ್ರಬಲ ಪ್ರಾಂತ್ಯವಾಗಿ ಉಳಿಸಿದ್ದಲ್ಲದೆ, ಮತಾಂಧರು ಮತ್ತು ಬ್ರಿಟಿಷರನ್ನು ಸೆದೆಬಡಿದಿದ್ದರು. ಆದರೆ ಇದಕ್ಕೆ ಇಂದು ಮೂಲಭೂತವಾದಿಗಳು ಸೇಡು ತೀರಿಸಿಕೊಂಡಿದ್ದಾರೆ" ಎಂದು ಕಿಡಿ ಕಾರಿದ್ದಾರೆ.

Edited By : Nagesh Gaonkar
PublicNext

PublicNext

17/08/2021 06:04 pm

Cinque Terre

202.72 K

Cinque Terre

27