ದಾವಣಗೆರೆ: ರಾಂಪುರ ಹಾಲಸ್ವಾಮಿ ಮಠದ ಆಸ್ತಿ ವಿವಾದ ತಾರಕಕ್ಕೇರಿದೆ. ಜಿಲ್ಲೆಯ ಹೊನ್ನಾಳಿ ತಾಲೂಕಿನ ರಾಂಪುರ ಹಾಲಸ್ವಾಮಿ ಮಠದ ಲಕ್ಷಾಂತರ ಭಕ್ತರನ್ನು ಹೊಂದಿರುವ ಪವಿತ್ರಾ ಶ್ರದ್ಧಾ ಭಕ್ತಿಯ ತಾಣ. ಮಠದ ಗೋಶಾಲೆಯ 11 ಹಸುಗಳನ್ನು ಅಕ್ರಮವಾಗಿ ಬೇರೆಯವರಿಗೆ ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಈಗ ಆಸ್ತಿ ವಿವಾದ ಮತ್ತೆ ಗರಿಗೆದರುವಂತೆ ಮಾಡಿದೆ.
ಗೋಶಾಲೆ ಹಸುಗಳನ್ನ ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಹೊನ್ನಾಳಿ ಪೊಲೀಸ್ ಠಾಣೆಗೆ ಭಕ್ತರು ದೂರು ನೀಡಿದ್ದಾರೆ. ಹಾಲಸ್ವಾಮಿ ಮಠದ ಉಸ್ತುವಾರಿಯಾಗಿರೋ ಶಿವಕುಮಾರ ಸ್ವಾಮಿಗಳ ವಿರುದ್ಧ ದೂರು ದಾಖಲಾಗಿದೆ. ಲಕ್ಷಾಂತರ ಭಕ್ತರನ್ನ ಹೊಂದಿರುವ ರಾಂಪುರ ಹಾಲಸ್ವಾಮಿ ಮಠದ ಶ್ರೀಗಳಾಗಿದ್ದ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿ ಅವರು 11 ತಿಂಗಳ ಹಿಂದೆ ಲಿಂಗೈಕ್ಯರಾಗಿದ್ದರು. ಹಾಲಸ್ವಾಮಿ ಮಠಕ್ಕೆ ತಾತ್ಕಾಲಿಕ ಉಸ್ತುವಾರಿ ಸ್ವಾಮಿಯಾಗಿ ನೇಮಕವಾಗಿದ್ದ ಶಿವಕುಮಾರ್ ಸ್ವಾಮೀಜಿ ಅವರು ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮಿಗಳ ಅಣ್ಣನಾಗಿದ್ದು, ಉಸ್ತುವಾರಿಯೂ ಶಿವಕುಮಾರ್ ಸ್ವಾಮಿ ಅವರದ್ದೇ ಆಗಿದೆ.
ಉಸ್ತುವಾರಿಯಾದ ನೇಮಕವಾದ ನಂತರ ಮಠದ ಆಸ್ತಿಯನ್ನ ತಮ್ಮ ಹೆಸರಿಗೆ ಮಾಡಿಕೊಳ್ಳತ್ತಿರೋ ಆರೋಪ ಕೇಳಿ ಬಂದಿದ್ದು, ಆರ್. ಎಂ. ಪ್ರಕಾಶ್ ಅವರು ಮಾಹಿತಿ ಹಕ್ಕಿನಡಿ ತೆಗೆಸಿದ ದಾಖಲೆಗಳಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.
ಮಠದ 1 ಎಕರೆ 12 ಗುಂಟೆ ಜಮೀನನ್ನ ತಮ್ಮ ಹೆಸರಿಗೆ ಮಾಡಿಕೊಳ್ಳಲು ಮುಂದಾಗಿರೋ ಸ್ವಾಮೀಜಿ ವಿರುದ್ಧ ಕೆರಳಿ ಕೆಂಡವಾಗಿರುವ ಭಕ್ತರು, ಮಠಕ್ಕೆ ಬೇರೆ ಸ್ವಾಮೀಜಿಯನ್ನ ನೇಮಕ ಮಾಡಿ ಮಠದ ಆಸ್ತಿ ಉಳಿಸಿ ಎಂದು ಒತ್ತಾಯಿಸಿದ್ದಾರೆ. ಕಾಶಿ ಜಗದ್ಗುರುಗಳು ಮಧ್ಯ ಪ್ರವೇಶಿಸಿ ಬೇರೆ ಸ್ವಾಮೀಜಿ ನೇಮಿಸುವಂತೆ ಒತ್ತಾಯಿಸಿದ್ದಾರೆ.
PublicNext
13/08/2021 09:48 pm