ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸವಣೂರು: ನಡುರಸ್ತೆಯಲ್ಲೇ ಯುವಕನ ಕೊಲೆ! ಬೆಚ್ಚಿಬಿದ್ದ ಸವಣೂರು ಜನರು

ಸವಣೂರು: ರಾಜ್ಯದ ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ಹಾಡುಹಗಲೇ ಕೊಡಲಿಯಿಂದ, ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದ್ದು, ಇಡೀ ಕ್ಷೇತ್ರದ ಜನರೇ ಭಯಭೀತಗೊಂಡಿದ್ದಾರೆ.

ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಕಾರಡಗಿ ಗ್ರಾಮದ ನಿವಾಸಿಯಾದ, ಹಜರತ್ ಅಲಿ ಶೇಕ್ ಉರ್ಫ್ ಅನ್ವರ್ ಶೇಕ್ ಹಾಗೂ ಅನ್ವರ್ ಟೈಗರ್ ಹೀಗೆ ಹಲವಾರು ಹೆಸರುಗಳಿಂದ ಪ್ರಸಿದ್ಧಿಯಾದ ಅನ್ವರ್ ಶೇಕ್‌ ಈ ಹಿಂದೆ ಸುಮಾರು ವರ್ಷಗಳಿಂದ ಸತತವಾಗಿ ಕೊಲೆ ಬೆದರಿಕೆ, ದರೋಡೆ ಇತ್ಯಾದಿ ಪ್ರಕರಣವನ್ನು ಮಾಡುತ್ತಾ ಜನರಿಂದ ಹಣವನ್ನು ಕಿತ್ತುಕೊಳ್ಳುತ್ತಿದ್ದ. ನ್ಯಾಯಾಲದ ಕಣ್ಣಿಗೆ ರೌಡಿಶೀಟರ್ ಆಗಿ ಉಳಿದಿದ್ದ. ಹಳೆಯ ರೌಡಿಶೀಟರ್ ಅನ್ವರ್ ಶೇಕ್‌ನ್ನು ಹಳೆಯ ದ್ವೇಷದಿಂದ ಸವಣೂರು ನಿವಾಸಿಯಾದ ಇಬ್ರಾಹಿಂ ಚೌದ್ರಿ ಕೊಲೆ ಮಾಡಿದ್ದಾನೆ, ಈ ಇಬ್ಬರ ಮಧ್ಯೆ ಹಲವಾರು ಬಾರಿ ತಂಟೆ ತಕರಾರುಗಳು ನಡೆಯುತ್ತಲೇ ಇದ್ದವು, ರವಿವಾರ ಸಂಜೆ 6 ಗಂಟೆಗೆ ಕಾರಡಗಿ ಕ್ರಾಸ್ ಬಳಿ ಅನ್ವರ್ ಶೇಕ್ ಸಿಕ್ಕ ಸಂದರ್ಭದಲ್ಲಿ ಇಬ್ರಾಹಿಂ ಚೌದ್ರಿ ಎಂಬ ವ್ಯಕ್ತಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಕೊಲೆಗೆ ಮುಖ್ಯ ಕಾರಣ ಈ ಹಿಂದೆ ಅನ್ವರ್ ಶೇಕ್ ಕೊಲೆಯಾದ ವ್ಯಕ್ತಿ ಇಬ್ರಾಹಿಂ ಚೌದ್ರಿ ಗಾಡಿಯನ್ನು ಸುಟ್ಟು ಹಾಕಿದ್ದಾನೆ. ಇದರಿಂದ ಕೋಪಗೊಂಡು ಕೊಲೆ ಮಾಡಿದ್ದೇನೆ ಎಂಬ ಸಂಶಯವೂ ಕಂಡುಬರುತ್ತಿದೆ.

ಹಾವೇರಿ ಜಿಲ್ಲೆ ಸವಣೂರ ತಾಲೂಕಿನಲ್ಲಿ ಮರಣ ಮೃದಂಗ ಪ್ರತಿವರ್ಷವೂ ನಡೆಯುತ್ತಲೇ ಇದೆ. ಹಾವೇರಿ ಜಿಲ್ಲೆಯನ್ನು ಏಲಕ್ಕಿ ಕಂಪಿನ ನಾಡು ಹಾಗೂ ಸಂತರ ನಾಡು ಎಂದು ಕರೆಯುತ್ತಿದ್ದರು. ಪ್ರತಿವರ್ಷ ಮರಣ ಮೃದಂಗವನ್ನು ಗಮನಿಸಿ ನೋಡಿದಾಗ, ಇದು ಕೊಲೆಗಳ ನಾಡು ಆಗಿ ಪರಿವರ್ತನೆಗೊಳ್ಳುತ್ತದೆ ಎನ್ನುವುದಕ್ಕೆ ಯಾವುದೇ ಸಂಶಯವಿಲ್ಲ. ಈ ಕೊಲೆ ಪ್ರಕರಣವು ಯಾವ ತಿರುವನ್ನು ಕಾಣುತ್ತದೆ ಎಂದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

Edited By : Manjunath H D
PublicNext

PublicNext

09/08/2021 04:50 pm

Cinque Terre

191.54 K

Cinque Terre

78