ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡ್ರಗ್ಸ್‌ಗೆ ಹಣವಿಲ್ಲವೆಂದು ಪುಟ್ಟ ಮಗನನ್ನೇ ಮಾರಿದ ತಂದೆ

ಅಸ್ಸಾಂ: ಡ್ರಗ್ಸ್ ಸೇವನೆಗೆ ಹಣವಿಲ್ಲವೆಂದು ತಂದೆಯೋರ್ವ ಎರಡೂವರೆ ವರ್ಷದ ಮಗನನ್ನೇ ಮಾರಾಟ ಮಾಡಿದ ಅಮಾನವೀಯ ಘಟನೆ ಅಸ್ಸಾಂನ ಮೊರಿಗನ್ ಜಿಲ್ಲೆಯಲ್ಲಿ ನಡೆದಿದೆ.

ಅಮಿನುಲ್ ಇಸ್ಲಾಂ ಎಂಬಾತ ಸಜೀದಾ ಬೇಗಂ ಎಂಬುವವರಿಗೆ 40 ಸಾವಿರ ರೂ.ಗೆ ಮಾರಾಟ ಮಾಡಿದ್ದ ಎನ್ನಲಾಗಿದೆ. ಸದ್ಯ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಗುವಿನ ತಾಯಿ ರುಕ್ಮಿಣಾ ಬೇಗಂ ಗಂಡನ ಜೊತೆ ಜಗಳವಾಡಿಕೊಂಡು ತನ್ನ ತಂದೆಯ ಮನೆಯಲ್ಲಿ ವಾಸವಿದ್ದರು. ಈ ವೇಳೆ ಅದೊಂದು ದಿನ ಮಾವನ ಮನೆಗೆ ಬಂದ ತಂದೆ ಅಮಿನುಲ್ ಇಸ್ಲಾಂ ಮಗುವಿಗೆ ಆಧಾರ್ ಕಾರ್ಡ್ ಮಾಡಿಸಬೇಕೆಂದು ಕಾರಣ ನೀಡಿ ಕರೆದೊಯ್ದಿದ್ದಾನೆ. ಎರಡು ಮೂರು ದಿನಗಳು ಕಳೆದರೂ ಗಂಡ ಮಗುವನ್ನು ಕರೆತರದಿದ್ದರಿಂದ ಅನುಮಾನಗೊಂಡ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ನಂತರ ಪೊಲೀಸರು ತನಿಖೆ ನಡೆಸಿ ಮಗುವನ್ನ ಪತ್ತೆಹಚ್ಚಿದ್ದಾರೆ.

Edited By : Vijay Kumar
PublicNext

PublicNext

08/08/2021 10:47 pm

Cinque Terre

48.5 K

Cinque Terre

3