ಬೈಕ್ ಸವಾರನೋರ್ವ ಕರ್ತವ್ಯನಿರತ ಪೊಲೀಸ್ ಅಧಿಕಾರಿಗೆ ಚಪ್ಪಲಿಯಿಂದ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಘಟನೆ ನಡೆದಿದ್ದು ಎಲ್ಲಿ ಹಾಗೂ ಯಾವಾಗ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.
ಹೆಲ್ಮೆಟ್ ಹಾಕದೆ ಸ್ಕೂಟಿ ಮೇಲೆ ಬಂದ ಸವಾರರನ್ನು ತಡೆದ ಪಿಎಸ್‌ಐ, ಸ್ಕೂಟಿ ಕೀ ಕಿತ್ತುಕೊಳ್ಳು ಮುಂದಾಗಿದ್ದರು. ಆಗ ಸವಾರ ಕೋಪದಿಂದ ಪಿಎಸ್‌ಐ ಕೈ ಎಳೆದಿದ್ದಾನೆ. ಇದರಿಂದ ಸಿಟ್ಟಿಗೆದ್ದ ಪೊಲೀಸ್ ಅಧಿಕಾರಿಯು ಸವಾರನ ಕೆನ್ನೆಗೆ ಬಾರಿಸಿದ್ದಾನೆ. ಇಬ್ಬರ ನಡುವಿನ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಸವಾರ ಚೆಪ್ಪಲಿ ಹಿಡಿದು ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದಾನೆ. ಸವಾರನ ನಡೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ಹಾಗೂ ವಿರೋಧ ವ್ಯಕ್ತವಾಗಿದೆ.
PublicNext
03/08/2021 08:00 pm