ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಬೈಲ್​ ಚಾರ್ಜ್ ಹಾಕುವ ವಿಚಾರಕ್ಕೆ ಜಗಳ- ಕೊಲೆಯಲ್ಲಿ ಅಂತ್ಯ!

ಬೆಂಗಳೂರು: ಮೊಬೈಲ್​ ಚಾರ್ಜ್ ಹಾಕುವ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ನಗರದ ರಾಜಾಜಿನಗರದಲ್ಲಿ ನಡೆದಿದೆ.

ಸುನಿಲ್ ಕೊಲೆಯಾದ ವ್ಯಕ್ತಿ. ಮಧ್ಯ ಪ್ರದೇಶ ಮೂಲದ ಸುನಿಲ್ ಹಾಗೂ ಮತ್ತೋರ್ವ ವ್ಯಕ್ತಿ ಕೆಲಸ ಮುಗಿಸಿಕೊಂಡು ಮನೆಗೆ ಬಂದ ವೇಳೆ ಮೊಬೈಲ್ ಚಾರ್ಜ್ ಹಾಕೋ ವಿಚಾರದಲ್ಲಿ ಜಗಳ ಶುರುವಾಗಿದೆ. ಒಂದೇ ಸ್ವಿಚ್​ ಇದ್ದು ಮೊಬೈಲ್​ ಚಾರ್ಜ್​ ಹಾಕಲು ನಾ ಮುಂದು, ತಾ ಮುಂದು ಎನ್ನುತ್ತಾ ಕುಡಿದ ಮತ್ತಿನಲ್ಲಿದ್ದ ಇಬ್ಬರ ನಡುವೆ ಸಣ್ಣದಾಗಿ ಜಗಳ ಶುರುವಾಗಿದೆ ಎನ್ನಲಾಗಿದ್ದು, ನಂತರ ಜಗಳ ತಾರಕ್ಕಕ್ಕೇರಿದ್ದು, ಇಬ್ಬರ ನಡುವೆ ತಳ್ಳಾಟ ನಡೆದ ಪರಿಣಾಮ ಪಕ್ಕದಲ್ಲಿದ್ದ ಸೌದೆಯಿಂದ ಆರೋಪಿಯು ಸುನಿಲ್ ತಲೆಗೆ ಬಾರಿಸಿದ್ದಾನೆ ಎನ್ನಲಾಗಿದೆ.

ತಲೆಗೆ ಬಿದ್ದ ಏಟಿನಿಂದ ತೀವ್ರ ಗಾಯಗೊಂಡಿದ್ದ ಮೃತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ರಾಜಾಜಿನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ವಿಚಾರಣೆ ಆರಂಭಿಸಿದ್ದಾರೆ.

Edited By : Vijay Kumar
PublicNext

PublicNext

03/08/2021 05:09 pm

Cinque Terre

29.67 K

Cinque Terre

1