ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾವಿರಾರು ಮರ ಕಡಿದು ಸುಟ್ಟು ಹಾಕಿದ ಕಿರಾತಕರು...!

ದಾವಣಗೆರೆ: ರಾತ್ರೋ ರಾತ್ರಿ ಸಾವಿರಕ್ಕೂ ಅಧಿಕ ಮರಗಳನ್ನು ದುಷ್ಕರ್ಮಿಗಳು ಕಡಿದು ಸುಟ್ಟು ಹಾಕಿದ ಘಟನೆ ಜಿಲ್ಲೆ ಜಗಳೂರು ತಾಲೂಕಿನ ಗೋಪಗೊಂಡನಹಳ್ಳಿ ಗ್ರಾಮದ ಸಮೀಪ ನಡೆದಿದೆ.

ಗೋಮಾಳ ಜಾಗ ಒತ್ತುವರಿಗೆ ಕೆಲ ಭೂಗಳ್ಳರ ರೂಪಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಗೋಪಗೊಂಡನಹಳ್ಳಿಯಿಂದ ಒಂದು ಕಿಲೋ ಮೀಟರ್ ದೂರವಿರೋ ಗೋಮಾಳ ಜಾಗದಲ್ಲಿ ಈ ಕೃತ್ಯ ಎಸಗಲಾಗಿದೆ. ಮರಗಳನ್ನ ಕಡಿದ ಬಳಿಕ ಜೆಸಿಬಿ ಮೂಲಕ ಬೇರು ಸಮೇತ ಕಿತ್ತು ಹಾಕಿರೋ ದುಷ್ಕರ್ಮಿಗಳು, ದೊಡ್ಡ ಮಷಿಗನ್ ಗಳ ಮೂಲಕ ನಾಶ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಗುಡ್ಡಗಾಡಿನಲ್ಲಿ ಜಮೀನು ಇರೋದ್ರಿಂದ ಯಾರಿಗೂ ಗೊತ್ತಾಗದಂತೆ ಒತ್ತುವರಿಗೆ ಸಂಚು ರೂಪಿಸಲಾಗಿತ್ತು‌.‌ ಜಗಳೂರು ತಾಲೂಕಿನ ಕುಳ್ಳೋಬನಹಳ್ಳಿ ಸರ್ವೆ ನಂಬರ್ 2\1 ಹಾಗೂ ಸರ್ವೆ ನಂಬರ್ 2\2 ರಲ್ಲಿ ಘಟನೆ ನಡೆದಿದ್ದು, ಭೂಗಳ್ಳರಿಗೆ ಸಾಥ್ ಜಗಳೂರು ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಸಾಥ್ ನೀಡಿದ್ದಾರಾ ಎಂಬ ಅನುಮಾನವೂ ಕಾಡಲಾರಂಭಿಸಿದೆ.

25 ಎಕರೆ ಗೋಮಾಳ ಜಾಗದಲ್ಲಿ 2 ಕೋಟಿ ರೂಪಾಯಿ ಹಣ ಖರ್ಚು ನೆಡುತೋಪು ಅನ್ನು ಸಾಮಾಜಿಕ ಅರಣ್ಯ ಇಲಾಖೆಯು ಮಾಡಿತ್ತು‌‌. ಆದ್ರೆ ಮರ ಕಡಿದು ಸುಟ್ಟು ಹಾಕುವವರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದರು.25 ಎಕರೆ ಜಮೀನಿನಲ್ಲಿ ಬೆಳೆದಿದ್ದ ಮರಗಳನ್ನ ಕಡಿದು ನಾಶ ಮಾಡಿ 5 ದಿನವಾದ್ರೂ ಇದುವರೆಗೂ ಯಾರ ಮೇಲೂ ಕ್ರಮ ತೆಗೆದುಕೊಳ್ಳದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ‌.

Edited By : Nagesh Gaonkar
PublicNext

PublicNext

31/07/2021 08:16 pm

Cinque Terre

100.92 K

Cinque Terre

5