ರಾಯ್‌ಪುರ್: ಆನೆ ಜೊತೆಗೆ ತನ್ನ ಮೊಬೈಲ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋದ ಯುವಕ ಸಾವನ್ನಪ್ಪಿದ ಘಟನೆ ಛತ್ತೀಸಗಡದಲ್ಲಿ ನಡೆದಿದೆ.
ಮೃತ ಯುವಕ 21 ವರ್ಷದವನಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮಕ್ಕೆ ನುಗ್ಗಿದ ಆನೆಯನ್ನು ಕಾಡಿಗೆ ಓಡಿಸಲು ಸ್ಥಳೀಯ ನಿವಾಸಿಗಳು ಜಮಾಯಿಸಿದ್ದರು. ಈ ವೇಳೆ ಮೃತ ಯುವಕ ತನ್ನ ಸ್ನೇಹಿತರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದ. ಕೋಪದಲ್ಲಿದ್ದ ಆನೆ ಏಕಾಏಕಿ ಯುವಕ ಮೇಲೆ ದಾಳಿ ನಡೆಸಿದೆ. ಪರಿಣಾಮ ಓರ್ವ ಮೃತಪಟ್ಟಿದ್ದು, ಮೂವರು ಗ್ರೇಟ್ ಎಸ್ಕೇಪ್ ಆಗಿದ್ದಾರೆ.
PublicNext
01/03/2021 07:30 am