ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ವರ-ವಧುರರನ್ನು ಹುಡುಕುವ ಮ್ಯಾಟ್ರಿಮೋನಿಯಲ್ ಸೈಟ್‌ಗಳು ಹೆಚ್ಚಾಗುತ್ತಲೇ ಇವೆ. ಅಷ್ಟೇ ಅಲ್ಲದೆ ಅದರಿಂದ ವಂಚನೆ ಕೇಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳಕಿಗೆ ಬರುತ್ತಿವೆ. ಇಂತಹದ್ದೇ ಪ್ರಕರಣವೊಂದು ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಶ್ರೀಕೃಷ್ಣನಗರದ ನಿವಾಸಿ ವಿನಾಯಕ ವಂಚನೆಗೆ ಒಳಗಾದವರು. ವಿನಾಯಕ ಅವರಿಗೆ 40 ವರ್ಷ ವಯಸ್ಸಾಗಿದ್ದರೂ ಮದುವೆಯಾಗಿಲ್ಲ. ಹೀಗಾಗಿ ವಧುವನ್ನು ಹುಡುಕಲು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ರಿಜಿಸ್ಟರ್ ಮಾಡಿಕೊಂಡಿದ್ದರು. ಬಳಿಕ ಯುವತಿಯೊಬ್ಬಳಿಗೆ ರಿಕ್ವೆಸ್ಟ್ ಕಳುಹಿಸಿದ್ದರು. ಆದರೆ ಫೆಬ್ರವರಿ 17ರಂದು ವಿನಾಯಕ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬರು ಫೋನ್ ಮಾಡಿ, ''ನಾವು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ನೀವು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ರಿಕ್ವೆಸ್ಟ್ ಕಳಿಸಿದ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಹೀಗಾಗಿ ತಕ್ಷಣವೇ ನೀವು ನಮ್ಮ ಬ್ಯಾಂಕ್ ಖಾತೆಗೆ ಹಣ ಹಾಕಿದರೆ ಪ್ರಕರಣ ಮುಚ್ಚಿಹಾಕುತ್ತೇವೆ' ಎಂದು ಬೆದರಿಕೆ ಹಾಕಿದ್ದಾರೆ.
ಫೋನ್ ಕರೆಯಿಂದ ಹೆದರಿದ ವಿನಾಯಕ ಅವರು ಹಂತ ಹಂತವಾಗಿ ಆರೋಪಿಗಳ ಬ್ಯಾಂಕ್ ಖಾತೆಗೆ ಹಣ ಹಾಕಿದ್ದಾರೆ. ನಂತರ ಆರೋಪಿಯ ಮೊಬೈಲ್‌ಗೆ ಫೋನ್ ಕರೆ ಮಾಡಿದರೆ ಸ್ವಿಚ್ ಆಫ್ ಬಂದಿದೆ. ಇದರಿಂದ ಕಂಗೆಟ್ಟ ವಿನಾಯಕ ಅವರು
ಪೊಲೀಸರು ಎಂದು ಹೇಳಿ ಹೆದರಿದ ವಿನಾಯಕ ಅವರು ಹಿಂದೆ ಮುಂದೆ ಯೋಚನೆ ಮಾಡದೇ ಅವರು ಸೂಚಿಸಿರುವ ಬ್ಯಾಂಕ್ ಅಕೌಂಟ್‌ಗೆ ಹಂತ-ಹಂತವಾಗಿ 1 ಲಕ್ಷ ರೂ ಹಾಕಿದ್ದಾರೆ. ನಂತರ ವಾಪಸ್ ಕರೆ ಮಾಡಿದಾಗ ಅದು ಮೊಬೈಲ್ ಸ್ವಿಚ್ ಆಫ್ ಆಗಿದೆ. ಹೀಗಾಗಿ ಅವರು ಬೆಂಗಳೂರಿನ ದಕ್ಷಿಣ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.
PublicNext
27/02/2021 03:44 pm