ಹೊಸಪೇಟೆ: ನಗರದ ಕೋರ್ಟ್ ಆವರಣದಲ್ಲಿ ಕಾಂಗ್ರೆಸ್ ಮುಖಂಡ ತಾರಿಹಳ್ಳಿ ವೆಂಕಟೇಶ್(48) ಎಂಬುವವರ ಕೊಲೆಯಾಗಿದೆ. ಕೊಲೆಯಾದ ತಾರಿಹಳ್ಳಿ ವೆಂಕಟೇಶ್ ವೃತ್ತಿಯಲ್ಲಿ ವಕೀಲರಾಗಿದ್ದರು.
ಆರೋಪಿ ಮನೋಜ್ ಎಂಬಾತನೇ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಕೋರ್ಟ್ ಆವರಣದಲ್ಲಿ ಕೂತಿದ್ದ ತಾರಿಹಳ್ಳಿ ವೆಂಕಟೇಶ್ ಎಂಬಾತರ ಮೇಲೆ ಮಚ್ಚಿನಿಂದ ಹೊಡೆದ ಮನೋಜ್ ಕೊಲೆಗೈದಿದ್ದಾನೆ. ಕೌಟುಂಬಿಕ ಕಲಹಕ್ಕೆ ಈ ಕೊಲೆ ನಡೆದಿದೆ ಎಂಬ ಶಂಕೆ ಇದ್ದು. ಆರೋಪಿ ಮನೋಜ್ ಈಗ ಪೊಲೀಸರ ಸುಪರ್ದಿಯಲ್ಲಿದ್ದಾನೆ.
PublicNext
27/02/2021 01:28 pm