ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಡು ರೋಡಲ್ಲಿ ವಕೀಲ ದಂಪತಿಯನ್ನು ಕೊಚ್ಚಿ ಕೊಂದರು

ಪೆದ್ದಪಲ್ಲಿ(ತೆಲಂಗಾಣ) ಹಾಡಹಗಲಲ್ಲೇ ವಕೀಲ ದಂಪತಿಯನ್ನ ಕೊಲೆಗಡಕರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ಘಟನೆ ತೆಲಂಗಾಣ ರಾಜ್ಯದ ಪೆದ್ದಪಲ್ಲಿ ಜಿಲ್ಲೆಯಲ್ಲಿ ನಡೆದಿದೆ.

ನಡುರಸ್ತೆಯಲ್ಲೇ ವಕೀಲ ದಂಪತಿಗಳನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡುತ್ತಿರುವ ದೃಶ್ಯ ಈಗ ಎಲ್ಲೆಡೆ ವೈರಲ್ ಆಗಿದೆ. ಗತ್ತು ವಾಮನ ರಾವ್ ಹಾಗೂ ನಾಗಮಣಿ ಎಂಬುವವರೇ ಭೀಕರವಾಗಿ ಕೊಲೆಯಾದ ವಕೀಲ ದಂಪತಿಗಳು. ಕಾರಿನಲ್ಲಿ ಹೊರಟಾಗ ಏಕಾಏಕಿ ಅಟ್ಯಾಕ್ ಮಾಡಿದ ಕೊಲೆಪಾತಕಿಗಳು ಅಡ್ಡಗಟ್ಟಿ ದಂಪತಿಯನ್ನ ಕೊಲೆಗೈದಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕೊಲೆಗಡುಕ ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆ ನಡೆದಿದೆ.

Edited By : Manjunath H D
PublicNext

PublicNext

18/02/2021 11:03 pm

Cinque Terre

134.79 K

Cinque Terre

17