ಹೊಸದಿಲ್ಲಿ : ಜ. 26 ರ ರೈತರ ಭಾರಿ ಪ್ರತಿಭಟನೆ ಹಿಂಸಾಚಾರಕ್ಕೆ ಕಾರಣವಾದ ವಿವಾದಿತ ಟೂಲ್ ಕಿಟ್ ಪ್ರಕರಣದ ಹಿಂದೆ ಅಂತಾರಾಷ್ಟ್ರಿಯ ಸಂಚಿದೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಭಾನುವಾರ ಬೆಂಗಳೂರಿನಲ್ಲಿ ಬಂಧಿಸಲ್ಪಟ್ಟ ದಿಶಾ ರವಿ ಎಂಬ ಯುವತಿಯೊಂದಿಗೆ ನಿಕಟ ಸಂಪರ್ಕ ಹೊಂದಿದ ನಿಕಿತಾ ಜೇಕಬ್ ಎಂಬ ಮಹಿಳೆ ಈಗ ತಲೆಮರೆಸಿಕೊಂಡಿದ್ದು ಅವಳ ಬಂಧನಕ್ಕೆ ದಿಲ್ಲಿ ನ್ಯಾಯಾಲಯ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಹೊರಡಿಸಿದ್ದಾರೆ.
ಈ ಷಡ್ಯಂತ್ರದ ಮಾಸ್ಟರ್ ಮೈಂಡ್ ಪೊಯೆಟ್ ಫಾರ್ ಜಸ್ಟಿಸ್ ಸಂಸ್ಥೆ ಮುಖ್ಯಸ್ಥ ಎಂ.ಒ ಧಲಿವಾಲ್. ಈತ ಕೆನಡಾದಲ್ಲಿರುವ ತನ್ನ ಸಹಯೋಗಿ ಪುನಿತ್ ಎಂಬಾತನ ಮೂಲಕ ನಿಕಿತಾ ಜೇಕಬ್ ಳನ್ನು ಸಂಪರ್ಕಿಸಿದ್ದಾನೆ. ಜ.26 ಮೊದಲೇ ಝೂಮ್ ಮೂಲಕ ದಿಶಾ, ನಿಕಿತಾ ಇನ್ನೂ ಕೆಲವರೊಂದಿಗೆ ಸಭೆ ನಡೆಸಿ ಗಣರಾಜ್ಯೋತ್ಸವದಂದು ಭಾರಿ ಧಮಾಕಾ ನಡೆಸಬೇಕು, ರೈತರಲ್ಲಿ ಅಸಂತೋಷವುಂಟು ಮಾಡಬೇಕು ಹಾಗೂ ವಿವಾದಾತ್ಮಕ ಸಂದೇಶಗಳನ್ನು ರವಾನಿಸಬೇಕೆಂದು ಸಲಹೆ ನೀಡಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ.
ದಿಲ್ಲಿ ಘಟನೆ ನಂತರ ಪೊಲೀಸರು ನಿಕಿತಾ ಜೇಕಬ್ ಮನೆಗೆ ತೆರಳಿದಾಗ ಆಕೆ ಆಗಲೇ ಪರಾರಿಯಾಗಿದ್ದಳು.
ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆಪಾದನೆ ಮೇರೆಗೆ ಬಂಧಿತಳಾಗಿರುವ ದಿಶಾ ರವಿ ಪ್ರಕರಣ ಈಗ ರಾಜಕೀಯ ತಿರುವು ಪಡೆದಿದ್ದು, ರಾಹುಲ್ ಗಾಂಧಿ, ಪ್ರಿಯಾಂಕಾ ವಾಡ್ರಾ, ಶಶಿ ತರೂರ ದಿಶಾ ಬಂಧನವನ್ನು ಖಂಡಿಸಿದ್ದಾರೆ, ಆಮ್ ಆದ್ಮಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ದಿಶಾಳ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಕಾಂಗ್ರೆಸ್ ಮುಖಂಡ ಪಿ. ಚಿದಂಬರಮ್, ರೈತರ ಹೋರಾಟಕ್ಕೆ ಬೆಂಬಲಿಸುವ ಟ್ವೀಟ್ ಚೀನಾ ಅತಿಕ್ರಮಣಕ್ಕಿಂತಲೂ ಅಪಾಯಕಾರಿಯೇ? ಎಂದು ಪ್ರಶ್ನಿಸಿದ್ದಾರೆ.
PublicNext
15/02/2021 12:41 pm