ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಚಿವ ಸುರೇಶ್ ಕುಮಾರ್ ಹೆಸರಲ್ಲಿ ನಕಲಿ ಖಾತೆ: ಹಣಕ್ಕೆ ಬೇಡಿಕೆ

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ಹಲವರಿಗೆ ಫ್ರೆಂಡ್ ರಿಕ್ವೆಸ್ಟ್ ಹಾಕಲಾಗಿದೆ. ಅಷ್ಟೇ ಅಲ್ಲ, ಮೆಸೆಂಜರ್ ಮೂಲಕ ಹಣಕ್ಕೆ ಬೇಡಿಕೆ ಇಡಲಾಗಿದೆ. ಈ ಆರೋಪದ ಮೇಲೆ ಸಿಐಡಿ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ನಕಲಿ ಖಾತೆ ತೆರೆದು ಸಾರ್ವಜನಿಕರ ಬಳಿ ಹಣ ಕೇಳುತ್ತಿರುವ ಬಗ್ಗೆ ಸಚಿವರ ಆಪ್ತ ಕಾರ್ಯದರ್ಶಿ ಪಿ.ಎಂ. ಚಿದಂಬರ ದೂರು ನೀಡಿದ್ದಾರೆ. ನಕಲಿ ಖಾತೆ ತೆರೆದು ವಂಚಿಸುತ್ತಿರುವ ವ್ಯಕ್ತಿ ವಿರುದ್ಧ ಈಗ ಎಫ್ ಐ ಆರ್ ದಾಖಲಾಗಿದೆ. ಹಿಂದಿ ಭಾಷೆಯಲ್ಲಿ ಮೆಸೇಜ್ ಮಾಡಿ ಹಣ ನೀಡುವಂತೆ ಕೇಳಲಾಗಿದೆ. ಹೀಗಾಗಿ ಹೊರ ರಾಜ್ಯದ ಸೈಬರ್ ವಂಚಕರು ಕೃತ್ಯ ಎಸಗಿರುವ ಸಾಧ್ಯತೆ ಇದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಸುರೇಶ್‌ಕುಮಾರ್ ಅವರ ಫೋಟೊವನ್ನು ಬಳಸಿಕೊಂಡು ‘ನಿಮ್ಮ ಸುರೇಶ್‌’ ಎಂಬ ಹೆಸರಿನಲ್ಲಿ ನಕಲಿ ಖಾತೆ ತೆರೆಯಲಾಗಿದೆ. ಅದರ ಮೂಲಕ ಹಲವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಲಾಗುತ್ತಿದೆ.

Edited By : Nagaraj Tulugeri
PublicNext

PublicNext

13/02/2021 10:49 am

Cinque Terre

83.49 K

Cinque Terre

3