ಹೈದರಾಬಾದ್: ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಅರಕು ಘಾಟ್‌ನ 200 ಅಡಿ ಆಳದ ಕಂದಕಕ್ಕೆ ಖಾಸಗಿ ಟೂರಿಸ್ಟ್ ಬಸ್ ಉರುಳಿದ್ದು 8 ಜನರು ಸಾವನ್ನಪ್ಪಿದ್ದಾರೆ. 15ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಹೈದರಾಬಾದ್‌ನ ದಿನೇಶ್ ಟ್ರಾವೆಲ್ಸ್‌ಗೆ ಸೇರಿದ ಟೂರಿಸ್ಟ್ ಬಸ್ 30 ಪ್ರಯಾಣಿಕರನ್ನು ಹೈದರಾಬಾದ್‌ನಿಂದ ಕರೆದೊಯ್ಯುತ್ತಿತ್ತು. ಆದರೆ ಮಾರ್ಗದಲ್ಲಿ ಅನಂತಗಿರಿ ಬಳಿಯ ಡುಮುಕು ಕುಗ್ರಾಮದಲ್ಲಿ ಕಡಿದಾದ ತಿರುವಿನಲ್ಲಿ ಚಲಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಬಸ್ ಕಂದಕಕ್ಕೆ ಉರುಳಿದೆ. ಪರಿಣಾಮ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದುರುಂತದಲ್ಲಿ ಮೃತಪಟ್ಟವರಿಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂತಾಪವನ್ನು ಸೂಚಿಸಿದ್ದಾರೆ. ಅಲ್ಲದೆ ಗಂಭೀರವಾಗಿ ಗಾಯಗೊಂಡವರು ಬೇಗ ಚೇರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.
PublicNext
12/02/2021 11:07 pm