ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

11ರ ಬಾಲೆ ಮೇಲೆರಗಿದ ಕಾಮುಕ ಅಂದರ್

ಚೆನ್ನೈ: ಪರಿಚಯಸ್ತರೇ ಮೈಮೇಲೆ ಎರಗಿದರೆ ಏನು ಮಾಡೋದು, ಹೇಳಿ! ಗೆಳತಿಯ ಮನೆಗೆ ಟ್ಯೂಷನ್ ಗೆಂದು ಹೋದ 11 ವರ್ಷದ ಬಾಲಕಿಯ ಮೇಲೆ ಲೈಂಗಿಕ ಶೋಷಣೆ ನಡೆದಿರುವ ಹೀನಾಯ ಘಟನೆ ಚೆನ್ನೈನಿಂದ ನಡೆದಿದೆ. ಚೆನ್ನೈ ನಗರದಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ತನ್ನ ಸಹಪಾಠಿಯ ತಂದೆಯ ಬಳಿ ಟ್ಯೂಷನ್ ಗೆ ಹೋಗುತ್ತಿದ್ದಳು. ಕಳೆದ ವಾರ ಹೀಗೇ ಟ್ಯೂಷನ್ ಕ್ಲಾಸಿಗೆ ಹೋಗಿದ್ದ ಆಕೆ ಅತ್ತುಕೊಂಡು ಮನೆಗೆ ಬಂದಿದ್ದಾಳೆ. ಗುಪ್ತಾಂಗದಲ್ಲಿ ರಕ್ತ ಬರುವಂತೆ ಗಾಯವಾಗಿದ್ದ ಬಾಲಕಿಯನ್ನು ಪಾಲಕರು ತಕ್ಷಣ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಲೈಂಗಿಕ ಶೋಷಣೆ ನಡೆದಿರುವುದನ್ನು ದೃಢಪಡಿಸಿದ ವೈದ್ಯರು ಚೈಲ್ಡ್ ಹೆಲ್ಪ್ ಲೈನ್ ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ವಿಚಾರಣೆ ನಡೆಸಿದ ಪೊಲೀಸರು ತನ್ನ ಮಗಳ ಸಹಪಾಠಿಯೂ ಆದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಶೋಷಣೆ ಮಾಡಿದ 44 ವರ್ಷದ ಗಂಡಸನ್ನು ಬಂಧಿಸಿದ್ದಾರೆ. ಪೋಕ್ಸೊ ಕಾಯ್ದೆಯಡಿ ಕೇಸು ದಾಖಲಿಸಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

Edited By : Nirmala Aralikatti
PublicNext

PublicNext

10/02/2021 03:57 pm

Cinque Terre

59.91 K

Cinque Terre

2