ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಛೇ... ಎಂಥಾ ದುರುಳರು.. ಹಸುಗೂಸು ತೊಟ್ಟಿಯಲ್ಲಿ ಎಸೆದು ಹೋದರು.. ನಾಯಿಗೆ ಆಹಾರವಾಯ್ತಾ ಶಿಶು...?

ದಾವಣಗೆರೆ: ಕಸದ ತೊಟ್ಟಿಯಲ್ಲಿ ನವಜಾತ ಶಿಶುವಿನ ಮೃತ ದೇಹ ಪತ್ತೆಯಾದ ಘಟನೆ ತಾಲೂಕಿನ ಆಲೂರು ಗ್ರಾಮದಲ್ಲಿ ನಡೆದಿದೆ. ಬೀದಿ ನಾಯಿಗೆ ಶಿಶು ತುತ್ತಾಗಿದ್ದು, ನೋಡಿದವರೆಲ್ಲಾ ಮಮ್ಮಲ ಮರಗಿದ್ದಾರೆ.

ಮೃತದೇಹದ ಕಾಲನ್ನು ಬೀದಿ ನಾಯಿ ತಿಂದು ಹಾಕಿದೆ. ಆಲೂರು ಗ್ರಾಮದ

ಪ್ರಾಥಮಿಕ ಆರೋಗ್ಯ ಕೇಂದ್ರದ ಹತ್ತಿರವಿರುವ ಕಸದ ತೊಟ್ಟಿಯಲ್ಲಿ ಪತ್ತೆಯಾಗಿದ್ದು, ಮೃತ ಶಿಶು ಕಂಡು ಗ್ರಾಮಸ್ಥರು ಕಣ್ಣೀರು ಸುರಿಸಿದ್ದಾರೆ.

ಶಿಶುವಿನ ಪೋಷಕರ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಲ್ಲು ಹೃದಯದವರಿಗೆ ಹಿಡಿಶಾಪ ಹಾಕಿದ್ದಾರೆ. ಸತ್ತ ಸ್ಥಿತಿಯಲ್ಲಿ ಮಗು ಪತ್ತೆಯಾದ ಪ್ರಕರಣ ಸಂಬಂಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
PublicNext

PublicNext

08/02/2021 05:36 pm

Cinque Terre

81.71 K

Cinque Terre

5