ಮುಂಬೈ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಯುವಕ ಯುವತಿಯರನ್ನು ಯಾಮಾರಿಸಿ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಡೇಟಿಂಗ್ ಆ್ಯಪ್ ಮೂಲಕ ದುಂಡು ಮಲ್ಲಿಗೆ ಸುಂದರಿ ಬರೋಬ್ಬರಿ 16 ಹುಡುಗರು ಮತ್ತು ಮೂವರು ಯುವತಿಯರಿಗೆ ಮಕ್ಮಲ್ ಟೋಪಿ ಹಾಕಿದ್ದಾಳೆ.
ನೈಸ್ ಆಗಿ ಮಾತನಾಡುವ ದಾಳಿಂಬೆ ಹಲ್ಲುಗಳ ಸುಂದರಿ ಹುಡುಗ ಹುಡುಗಿಯರನ್ನು ತನ್ನ ಪ್ರೇಮದ ಬಲೆಯಲ್ಲಿ ಬೀಳಿಸಿಕೊಂಡು ಸುಲಿಗೆ ಮಾಡಿ ಪರಾರಿಯಾಗುತ್ತಿದ್ದಳು. ಎರಡು ದಿನಗಳ ಹಿಂದೆ ಮಹಾರಾಷ್ಟ್ರದ ಪಿಂಪರಿ-ಚಿಂಚವಾಡಾ ಠಾಣೆಯ ನಾಲ್ವರು ಅಧಿಕಾರಿಗಳ ತಂಡ ಸುಂದರಿಯನ್ನ ಅರೆಸ್ಟ್ ಮಾಡಿದೆ.
27 ರ ಸಯಾಲಿ ಉರ್ಫ್ ಶಿಖಾ ದೇವೇಂದ್ರ ಕಾಳೆ ಬಂಧಿತ ವಂಚಕಿ. ಆರೋಪಿ ಸಯಾಲಿ 16 ಯುವಕರನ್ನ ತನ್ನ ಪ್ರೇಮದ ಪಾಶದಲ್ಲಿ ಬಂಧಿಸಿ ಅವರ ಬಳಿಯಲ್ಲಿರುವ ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾಗುತ್ತಿದ್ದಳು. ಬಂಬಲ್ ಡೇಟಿಂಗ್ ಆ್ಯಪ್ ನಲ್ಲಿ ಸೆಕ್ಸ್ ಗಾಗಿ ಹುಡುಗಿಯರನ್ನ ಹುಡುಕುತ್ತಿರೋ ಯುವಕರನ್ನೇ ಸಯಾಲಿ ಟಾರ್ಗೆಟ್ ಮಾಡಿ ಹೋಟೆಲ್ ರೂಂ ಕಾಯ್ದಿರಿಸಿ ಬಾ ಎನ್ನುತ್ತಿದ್ದಳು ಅಲ್ಲಿಗೆ ಬಂದ ಹುಡುಗರಿಗೆ ಮದ್ಯದಲ್ಲಿ ನಿದ್ದೆ ಮಾತ್ರೆ ಸೇರಿಸಿ ಚೈನ್, ಉಂಗುರ, ವಾಚ್, ಮೊಬೈಲ್ ಮತ್ತು ಹಣ ಕಿತ್ಕೊಂಡು ಜೂಟ್ ಆಗುತ್ತಿದ್ದಳು. ನಂತರ ಆತನೊಂದಿಗೆ ಚಾಟ್ ಮಾಡಿದ್ದ ಮೊಬೈಲ್ ನಂಬರ್, ಡೇಟಿಂಗ್ ಆ್ಯಪ್ ಖಾತೆಯನ್ನ ಡಿಲೀಟ್ ಮಾಡುತ್ತಿದ್ದಳು.
ಇದೇ ರೀತಿ 16 ಹುಡುಗರಿಗೆ ಮಕ್ಮಲ್ ಟೋಪಿ ಹಾಕಿದ್ದಳು.
ಪಿಂಪರಿ ಚಿಂಚವಾಡ ಬ್ರ್ಯಾಂಚ್ ಪೊಲೀಸರು ನಾಲ್ಕು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಟೀಂ ರಚನೆ ಮಾಡಿ ಇನ್ ಸ್ಪೆಕ್ಟರ್ ಪ್ರಸಾದ್ ಗೋಖಲೆ ತಮ್ಮ ತಂಡದ ಸದಸ್ಯರೊಂದಿಗೆ ಅದೇ ಡೇಟಿಂಗ್ ಆ್ಯಪ್ ನಲ್ಲಿ ಖಾತೆ ತರೆದು ಸಯಾಲಿಗಾಗಿ ಶೋಧ ನಡೆಸಿ ಬಂದಿಸಿದ್ದಾರೆ.
ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವ ಸಯಾಲಿ ಇದುವರೆಗೂ ಮೂವರು ಯುವತಿಯರು ಮತ್ತು 16 ಯುವಕರಿಗೆ ಪ್ರೀತಿ ಹೆಸರಲ್ಲಿ ಮೋಸ ಮಾಡಿರೋದಾಗಿ ಒಪ್ಪಿಕೊಂಡಿದ್ದಾಳೆ.
PublicNext
06/02/2021 01:48 pm