ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಾರಾಷ್ಟ್ರ ಪುಂಡರ ಅಟ್ಟಹಾಸ: ಮರಾಠಿ ಮಾತನಾಡುವಂತೆ ಕನ್ನಡ ಲಾರಿ ಚಾಲಕನ ಮೇಲೆ ಹಲ್ಲೆ

ಬೆಳಗಾವಿ : ಕರ್ನಾಟಕದ ಲಾರಿ ಚಾಲಕನಿಗೆ ಮರಾಠಿ ಮಾತನಾಡುವಂತೆ ಒತ್ತಾಯ ಮಾಡಿದ್ದೂ ಅಲ್ಲದೇ ಹಲ್ಲೆ ಮಾಡಿದ ಘಟನೆ ಮಹಾರಾಷ್ಟ್ರದ ಸಾತಾರಾ ಟೋಲ್ ಗೇಟ್ ಬಳಿ ಶುಕ್ರವಾರ ರಾತ್ರಿ ಎಂಟು ಗಂಟೆಗೆ ನಡೆದಿದೆ.

ಮೇಲ್ಕಾಣಿಸಿದ ಚಿತ್ರದಲ್ಲಿರುವ ತುಮಕೂರು ತಾಲೂಕಿನ ಶಿರಾ ಮೂಲದ ಲಾರಿ ಚಾಲಕ ಗೋವಿಂದ ಎಂಬುವರರು ಗುಜರಾತಿನ ಅಹಮದಾಬಾದ್ ನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದರು. ಈ ಸಂದರ್ಭದಲ್ಲಿ ಮಹಾರಾಷ್ಟ್ರ ಪುಂಡರು ಮರಾಠಿ ಭಾಷೆ ಮಾತನಾಡುವಂತೆ ಒತ್ತಾಯಿಸಿ. ಅರೆ ಬೆತ್ತಲೆಗಿಳಿಸಿ ಹಲ್ಲೆ ಮಾಡಿದ ಘಟನೆ ನಡೆದಿದೆ. ಈ ಕುರಿತಂತೆ ಚಾಲಕ ಗೋವಿಂದ ವಿಡಿಯೋ ಒಂದನ್ನು ಮಾಡಿ ಅಸಹಾಯಕತೆ ತೋಡಿಕೊಂಡಿದ್ದಾರೆ.

ಈ‌ ಪ್ರಕರಣ ಕುರಿತಂತೆ ಬೆಳಗಾವಿ ಪೊಲೀಸರು ಮಾಹಿತಿ ಪಡೆದಿದ್ದು ಚಾಲಕನ್ನು ಬೆಳಗಾವಿಗೆ ಕರಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಜೊತೆಗೆ ಬೆಂಗಳೂರಿನ ಲಾರಿ ಮಾಲೀಕ ಕುಮಾರ್ ಎಂಬುವವರು ಪೊಲೀಸ್ ಜೊತೆಗೆ ಮಾತನಾಡಿದ್ದು ಈ ಪ್ರಕರಣ ಕುರಿತಂತೆ ಕನ್ನಡ ಹೋರಾಟಗಾರ ಸಾ.ರಾ ಗೋವಿಂದು ಜೊತೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ.

Edited By : Nagaraj Tulugeri
PublicNext

PublicNext

05/02/2021 11:04 pm

Cinque Terre

156.44 K

Cinque Terre

24