ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಲಂಚ ಪಡೆಯುತ್ತಿದ್ದಾಗ ಎಸಿಬಿಗೆ ಸಿಕ್ಕಿಬಿದ್ದ ಕಂಪ್ಯೂಟರ್ ಆಪರೇಟರ್

ಗದಗ: ಆಸ್ತಿಯ ಖಾತಾ ಬದಲಾವಣೆ ಹಾಗೂ ಕಂಪ್ಯೂಟರ್ ಉತಾರ (ದಾಖಲೆ) ನೀಡಲು ಲಂಚ ಪಡೆಯುತ್ತಿದ್ದ ಶಿರಹಟ್ಟಿ ಪಟ್ಟಣ ಪಂಚಾಯಿತಿಯ ಕಂಪ್ಯೂಟರ್ ಆಪರೇಟರ್ ರೆಡ್ ಹ್ಯಾಂಡ್ ಆಗಿ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.

ಶರಣಪ್ಪ ಗೌಳಿ ಬಂಧಿತ ಆರೋಪಿ. ಶಿರಹಟ್ಟಿಯ ಅಸ್ಥಳೀಯ ನಿವಾಸಿಯೊಬ್ಬರು ತಮ್ಮ ಆಸ್ತಿಯ ಖಾತಾ ಬದಲಾವಣೆ ಮಾಡಿ ಕಂಪ್ಯೂಟರ್ ಉತಾರ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿ ಸಲ್ಲಿಸಿ ಹಲವು ತಿಂಗಳು ಕಳೆದರೂ ಉತಾರ ಒದಗಿಸಿರಲಿಲ್ಲ. ಉತಾರ ನೀಡಲು 3,500 ರೂ. ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ.

ಈ ಕುರಿತು ಅರ್ಜಿದಾರನ ದೂರಿನ ಮೇರೆಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು, ಆರೋಪಿ ಶರಣಪ್ಪ ಗೌಳಿ ಅವರನ್ನು ವಶಕ್ಕೆ ಪಡೆದಿದ್ದಾರೆ.ಎಸಿಬಿ ಡಿವೈಎಸ್ಪಿ ಎನ್.ವಾಸುದೇವ ರಾಮ್ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

Edited By : Vijay Kumar
PublicNext

PublicNext

02/02/2021 04:32 pm

Cinque Terre

46.55 K

Cinque Terre

8