ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಪ್ರಾಪ್ತೆ ಸೇರಿ ಒಂದೇ ಕುಟುಂಬದ ನಾಲ್ವರ ಮೇಲೆ ಅತ್ಯಾಚಾರ ಎಸಗಿದ ಕಾಮುಕ.!

ಜೈಪುರ: ಕಾಮುಕನೊಬ್ಬ ಅಪ್ರಾಪ್ತೆ ಸೇರಿದಂತೆ ಒಂದೇ ಕುಟುಂಬದ ನಾಲ್ವರ ಮೇಲೆ ಅತ್ಯಾಚಾರ ಎಸಗಿದ ಘಟನೆ ರಾಜಸ್ಥಾನದ ಜಿಲ್ಲೆ ದೌಸಾ ಜಿಲ್ಲೆಯಲ್ಲಿ ನಡೆದಿದೆ.

ಆರೋಪಿ ವಿಷ್ಣು ಗುರ್ಜರ್ ಸಂತ್ರಸ್ತರ ಮನೆಯ ಸಮೀಪದಲ್ಲೇ ದಾಭಾ ಇಟ್ಟುಕೊಂಡಿದ್ದ. ಕುಟುಂಬದ ಮಹಿಳೆಯೊಬ್ಬಳ ಮೇಲೆ ಕಳೆದ ಒಂದು ವರ್ಷದ ಹಿಂದೆ ಅತ್ಯಾಚಾರ ಎಸಗಿದ್ದ. ಇದೀಗ ಆರೋಪಿ ಮಹಿಳೆಯ ತಂಗಿಯರು ಮತ್ತು ಮಗಳ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದಾನೆ. ಈ ವಿಚಾರ ಮಹಿಳೆಯ ಗಮನಕ್ಕೆ ಬಂದ ಕೂಡಲೇ ಆಕೆ ಪೊಲೀಸರನ್ನು ಸಂಪರ್ಕಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆ.

ಮಹಿಳೆಯು ಜನವರಿ 21ರಂದು ಸಮೀಪದ ಪೊಲೀಸ್‌ ಠಾಣೆಗೆ ತೆರಳಿ ಕಾಮುಕ ವಿಷ್ಣು ಗುರ್ಜರ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಳು. ಅದೇ ದಿನ ಮಹಿಳೆಯ ಸಹೋದರಿಯರು ಕೂಡ ಆತನ ವಿರುದ್ಧ ದೂರು ದಾಖಲಿಸಿದ್ದಾರೆ. ಈ ವಿಚಾರ ಕುಟುಂಬದ ಇತರ ಸದಸ್ಯರ ಗಮನಕ್ಕೆ ಬಂದಿದ್ದು, ಅವರು ಕೂಡ ಗುರ್ಜರ್ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿ ವಿಷ್ಣು ಗುರ್ಜರ್‌ಗೆ ಬಲೆ ಬೀಸಿದ್ದಾರೆ.

Edited By : Vijay Kumar
PublicNext

PublicNext

25/01/2021 11:30 am

Cinque Terre

126.4 K

Cinque Terre

4