ನೆಲಮಂಗಲ: ಪತಿ ಶೀಲ ಶಂಕಿಸಿದ್ದಕ್ಕೆ ಮಹಿಳೆಯೊಬ್ಬಳು ಸುದೀರ್ಘ ಪತ್ರ ಬರೆದು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ಪೇಟೆಯಲ್ಲಿ ನಡೆದಿದೆ.
ದಾಬಸ್ಪೇಟೆಯ ವಿದ್ಯಾಧರೆ (38) ಆತ್ಮಹತ್ಯೆಗೆ ಶರಣಾದ ಮಹಿಳೆ. ವಿದ್ಯಾಧರೆ ನೇಣಿಗೆ ಶರಣಾಗುವ ಮುನ್ನ ಡೆತ್‌ನೋಟ್ ಬರೆದಿಟ್ಟಿದ್ದು, ಪತಿ ಉಮೇಶ್ ಅನುಮಾನ ವ್ಯಕ್ತಪಡಿಸುತ್ತಿದ್ದ ಎಂದು ತಿಳಿಸಿದ್ದಾಳೆ. ಜೊತೆಗೆ ತನ್ನ ಅಂತ್ಯಕ್ರಿಯೆಯನ್ನು ತವರಿನಲ್ಲೇ ಮಾಡಬೇಕು ಎಂದು ಬರೆದುಕೊಂಡಿದ್ದಾಳೆ.
''ನನ್ನ ಸಾವಿಗೆ ಯಾರೂ ಕಾರಣವಲ್ಲ. ನನ್ನ ತಪ್ಪುಗಳಿಂದ ಈ ನಿರ್ಧಾರಕ್ಕೆ ಬಂದಿರುವೆ. ನನ್ನ ಮಾತು ಒರಟು ಆದರೆ ನಿಮ್ಮನ್ನು (ಪತಿಯನ್ನು) ಬಿಟ್ಟರೆ ಯಾರಿಗೂ ನನ್ನ ಮನಸ್ಸಿನಲ್ಲಿ ಅವಕಾಶ ನೀಡಿಲ್ಲ. ಆದರೆ ನೀವು ನನ್ನ ಭಾವನೆಗಳಿಗೆ ಯಾವತ್ತೂ ಸ್ಪಂದಿಸಲಿಲ್ಲ. ಹೊರತಾಗಿ ನನ್ನನ್ನು ಅನುಮಾನದಿಂದಲೇ ನೋಡಿದ್ರಿ'' ಎಂದು ವಿದ್ಯಾಧರೆ ನಾಲ್ಕು ಪುಟಗಳ ಡೆತ್‌ನೋಟ್ ಬರೆದಿದ್ದಾಳೆ.
PublicNext
25/01/2021 08:00 am