ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ATM ನಿಂದ ಲಕ್ಷಾಂತರ ಹಣ ಎಗರಿಸಿದ್ದ ವಿದೇಶಿ ಮಹಿಳೆ ಅರೆಸ್ಟ್..

ಬೆಂಗಳೂರು: ದಿನದಿಂದ ದಿನಕ್ಕೆ ಕ್ರೈ ರೇಟ್ ಗಳು ಹೆಚ್ಚಾಗುತ್ತಿವೆ. ಎಲ್ಲೆಂದರಲ್ಲಿ ಬರೀ ಅಪರಾಧದ ಸುದ್ದಿಗಳೇ ಹೆಚ್ಚು ಎಟಿಎಂನಲ್ಲಿ ಡಿವೈಸ್ ಸೆಟ್ ಮಾಡಿ ಲಕ್ಷಾಂತರ ರೂಪಾಯಿ ಎಗರಿಸಿದ್ದ ವಿದೇಶಿ ಮಹಿಳೆಯನ್ನು ಬೆಂಗಳೂರಿನ ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂದಿಸಿದ್ದಾರೆ.

ಶಿವರಾಮ ಕಾರಂತ ನಗರದ ಎಸ್ ಬಿಐ ಬ್ಯಾಂಕ್ ಬಳಿ ಎರಡು ಎಟಿಎಂಗಳಿದ್ದು, 2 ಎಟಿಎಂಗಳ ಫೈಕಿ ಒಂದು ಎಟಿಎಂಗೆ ಬ್ಯಾಂಕ್ ಡಿವೈಸ್ ತೆಗೆದು ಬೇರೆ ಡಿವೈಸ್ ಸೆಟ್ ಮಾಡಿದ ಸ್ಪೇನ್ ದೇಶದ ಮಹಿಳೆ ಹಣ ಡ್ರಾ ಮಾಡುವ ಸೋಗಿನಲ್ಲಿ ಲಕ್ಷ ಲಕ್ಷ ಹಣ ಎಗರಿಸಿದ್ದಾಳೆ.

ವಿದೇಶಿ ಲೇಡಿಯ ಕೈಚಳ ನೋಡಿ ಒಂದು ಕ್ಷಣ ಬ್ಯಾಂಕ್ ಸಿಬ್ಬಂದಿಯೇ ಶಾಕ್ ಆಗಿದ್ದು, ಒಂದು ಡಿವೈಸ್ನಿಂದ ಬರೋಬ್ಬರಿ 18 ಲಕ್ಷ ಹಣವನ್ನು ಈ ಖತರ್ನಾಕ್ ಲೇಡಿ ಎಗರಿಸಿದ್ದಾಳೆ.

ಸದ್ಯ 1500 ರೂಪಾಯಿ ಹಣ ಡ್ರಾ ಮಾಡಲು ಹೋಗಿದ್ದ ಗ್ರಾಹಕನಿಗೆ ಎಟಿಎಂನಿಂದ 1 ಲಕ್ಷ ಹಣ ಬಂದಿದ್ದು, ಕೂಡಲೇ ಬ್ಯಾಂಕ್ ಮ್ಯಾನೇಜರ್ ಗೆ ಗ್ರಾಹಕ ಮಾಹಿತಿ ನೀಡಿದ್ದಾನೆ. ಗ್ರಾಹಕನ ದೂರಿನ ಮೇರೆಗೆ ಎಟಿಎಂ ಪರಿಶೀಲನೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಎಟಿಎಂನಲ್ಲಿ ಡಿವೈಸ್ ಸೆಟ್ ಮಾಡಿ ಕಳ್ಳತನ ಮಾಡಿದ ವಿದೇಶಿ ಮಹಿಳೆ ಪೊಲೀಸರ ಅತಿಥಿಯಾಗಿದ್ದಾಳೆ.

Edited By : Nirmala Aralikatti
PublicNext

PublicNext

17/01/2021 01:43 pm

Cinque Terre

71.22 K

Cinque Terre

3