ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುಂಡಿಕ್ಕಿ ಕೆಇಬಿ ನೌಕರನ ಕೊಲೆ

ಹಾಸನ: ಕೆಇಬಿ ನೌಕರನ ಮೇಲೆ ಶೂಟೌಟ್ ಮಾಡಿದ ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ. ಹಾಸನದ ಹೂವಿನಹಳ್ಳಿ ಸಮೀಪ ಈ ಘಟನೆ ನಡೆದಿದೆ.

ಸಂತೋಷ್ (36) ಎಂಬಾತನೇ ಕೊಲೆಯಾದ ಕೆಇಬಿ ನೌಕರ. ಹೂವಿನಹಳ್ಳಿ ಕಾವಲು ಬಳಿ ಜಮೀನಿನಲ್ಲಿ ಸಂತೋಷ್ ಶವ ಪತ್ತೆಯಾಗಿದೆ. ಶವ ಇದ್ದ ಸ್ಥಳದಲ್ಲಿ ಮದ್ಯದ ಬಾಟಲಿಗಳು ಹಾಗೂ ಊಟದ ಪಾರ್ಸಲ್ ಪೇಪರ್ ಪತ್ತೆಯಾಗಿದೆ. ಹೀಗಾಗಿ ಕೊಲೆ ಮಾಡುವ ಮುನ್ನ ಹಂತಕರು ಇದೇ ಸ್ಥಳದಲ್ಲಿ ಪಾರ್ಟಿ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ತನಿಖೆ ಆರಂಭಿಸಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.

Edited By : Nagaraj Tulugeri
PublicNext

PublicNext

16/01/2021 01:31 pm

Cinque Terre

79.14 K

Cinque Terre

1