ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಯುವತಿ ಹಿಂದೆ ಬಿದ್ದು ಸಲಿಂಗಕಾಮ ತೊರೆದವನ ತಲೆ ಕತ್ತರಿಸಿದ..!

ಬೆಂಗಳೂರು: ಯುವತಿ ಹಿಂದೆ ಬಿದ್ದು ಸಲಿಂಗಕಾಮ ತೊರೆದವನ ತಲೆ ಕತ್ತರಿಸಿದ ಆಘಾತಕಾರಿ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

ಹೌದು. ಹಂಪಿನಗರ ಸಮೀಪದ ರೈಲು ಹಳಿ ಮೇಲೆ ಪತ್ತೆಯಾಗಿದ್ದ ಶವದ ಪರಿಚಯದ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರಿಗೆ ಈ ಆಘಾತಕಾರಿ ವಿಚಾರ ಗೊತ್ತಾಗಿದೆ. ಯಶವಂತಪುರದ ಆರ್​ಎಂಸಿ ಯಾರ್ಡ್ ನಿವಾಸಿ, ಬಿಹಾರ ಮೂಲದ ಅಫ್ರೋಜ್ (34) ಕೊಲೆಯಾದ ವ್ಯಕ್ತಿ. ಅಫ್ರೋಜ್ ಸಲಿಂಗಕಾಮ ತೊರೆದು ಯುವತಿಯ ಹಿಂದೆ ಹೋದನೆಂಬ ಕಾರಣಕ್ಕೆ ಅಫ್ರೋಜ್​ನನ್ನು ಈತನ ಸ್ನೇಹಿತ ಸಿದ್ದಿಕಿಯೇ ಹತ್ಯೆಗೈದಿದ್ದಾನೆ.

ಅಫ್ರೋಜ್ ಹಲವು ವರ್ಷಗಳಿಂದ ಯಶವಂತಪುರದ ಆರ್​ಎಂಸಿ ಯಾರ್ಡ್​ನಲ್ಲಿ ಹೋಟೆಲ್ ನಡೆಸುತ್ತಿದ್ದ. ಪತ್ನಿಯಿಂದ ದೂರಾಗಿದ್ದ ಆತ ಹೋಟೆಲ್​ನಲ್ಲೇ ನೆಲೆಸಿದ್ದ. ಕೆಲ ವರ್ಷಗಳ ಹಿಂದೆ ಸಿಕ್ಕಿದ್ದ ಸ್ನೇಹಿತ ಸಿದ್ದಿಕಿ ಜೊತೆಗೆ ಆತ್ಮೀಯತೆ ಮೂಡಿಸಿ, ಹಣ ನೀಡಿ ಸಲಿಂಗಕಾಮ ಆರಂಭಿಸಿದ್ದ. ಆದರೆ ಇತ್ತೀಚೆಗೆ ಯುವತಿಯೊಬ್ಬಳ ಹಿಂದೆ ಬಿದ್ದ ಅಫ್ರೋಜ್​ಗೆ ಎಚ್ಚರಿಕೆ ನೀಡಿದ್ದ.

ಕೊನೆಗೂ ಯುವತಿಯ ಸಹವಾಸ ಬಿಡದ ಅಪ್ರೋಜ್​ ಕೊಲೆಗೆ ಸಿದ್ದಿಕಿ ಸಂಚು ರೂಪಿಸಿದ್ದ. ಅದರಂತೆ ಜನವರಿ 2ರಂದು ರಾತ್ರಿ ಹಂಪಿನಗರದ ಶ್ರೀ ಕೃಷ್ಣದೇವರಾಯ ರೈಲು ನಿಲ್ದಾಣ ಬಳಿ ಅಪ್ರೋಜ್‌ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದರು. ಬಳಿಕ ರೈಲು ಹಳಿಗಳ ಮೇಲೆ ಶವ ಎಸೆದು ಪರಾರಿಯಾಗಿದ್ದರು. ರೈಲು ಹರಿದು ಮೃತದೇಹ ತುಂಡಾಗಿತ್ತು.

ಪಿಎಸ್​ಐ ಭಾರತಿ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ತನಿಖೆ ಆರಂಭಿಸಿದಾಗ ಆರೋಪಿ ಸಿಕ್ಕಿಬಿದ್ದಿದ್ದಾರೆ.

Edited By : Vijay Kumar
PublicNext

PublicNext

13/01/2021 11:03 pm

Cinque Terre

76.11 K

Cinque Terre

9