ಹುಬ್ಬಳ್ಳಿ: ಬ್ಯಾಂಕ್ ಲೋನ್ ಮತ್ತು ಉದ್ಯೋಗ ಕೊಡಿಸುತ್ತೆನೆಂದು ಹೇಳಿ, ಮಹಿಳೆಯೊಬ್ಬಳು ಸುಮಾರು 50 ಲಕ್ಷಕ್ಕೂ ಹೆಚ್ಚು ಹಣವನ್ನು ಪಡೆದು ಸುಮಾರು ನೂರಕ್ಕೂ ಹೆಚ್ಚು ಜನರಿಗೆ ಮೋಸ ಮಾಡಿರುವ ಆರೋಪ ಹುಬ್ಬಳ್ಳಿಯ ಹೊಸುರ ಬಡಾವಣೆ ಬಳಿ ನಡೆದಿದೆ....
ಹೀಗೆ ಒಂದು ಮನೆಯ ಮುಂದೆ ಇಷ್ಟು ಜನರು ನಿಂತಿರುವವರು ಹಣ ಕಳೆದುಕೊಂಡವರು, ಲೋನ ಮೂಲಕ ಲಕ್ಷಾಂತರ ರೂ. ಮತ್ತು ಕೆಲಸದ ಆಮಿಷಗಳಿಗೆ ಇವರೆಲ್ಲ ಸಾವಿರಾರು ರೂ. ಹಣ ಕೊಟ್ಟು ಮೋಸಕ್ಕೆ ಇಡಾಗಿದ್ದಾರೆ.
ಕಳೆದ 10 ತಿಂಗಳಿನಿಂದ ಹಣ ಕೊಟ್ಟವರು ಕೇಳಲು ಹೋದರೆ ಹಲವಾರು ಕಾರಣಗಳನ್ನು ಹೇಳಿ ಕಳಿಸುತ್ತಿದ್ದ ಈ ಮಹಿಳೆ, ಈಗ ಇದೇ ಜನರ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿದ್ದ ಬಿದ್ದಿದ್ದಾಳೆ. ಮೋಸ ಮಾಡಿದ ಮಹಿಳೆಯನ್ನು ಕೂಡಲೇ ಮನೆಯಲ್ಲಿ ಕೂಡಿ ಹಾಕಿ ಹಣ ಕೇಳಿದರೆ ನಾನು ತೆಗೆದುಕೊಂಡಿಲ್ಲ ಎಂದು ತಿರುಗಿ ಬಿದ್ದಿದ್ದಾಳೆ.
ಲಕ್ಷ್ಮೀ ಅಲಿಯಾಸ್ ಮೆಹಬೂಬಿ, ಪುಷ್ಪಾ ದೇವರ್ಕರ ಇವಬ್ಬರ ಮಹಿಳೆರು ಇಷ್ಟೆಲ್ಲ ಜನರಿಗೆ ಮೋಸ ಮಾಡಿದವರು. ಈಗ ಹಣದ ಬಗ್ಗೆ ಕೇಳಿದರೆ ಏನು ಹೇಳುತ್ತಾರೆ ಕೇಳಿ...
ಹುಬ್ಬಳ್ಳಿಯ ಹೊಸುರು ಬಡಾವಣೆಯಲ್ಲಿರುವ ಮಹಿಳೆಯರು ಮನೆ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಸಾಲ ಸಿಗುತ್ತದೆ. ಕೆಲಸದ ಆಸೆಗಾಗಿ ಕೂಡಿಟ್ಟ ಹಣವನ್ನೆಲ್ಲ ಕೊಟ್ಟಿದ್ದಾರೆ.
ಇತ್ತ ಕೆಲಸವೂ ಇಲ್ಲದೇ, ಕೊಟ್ಟ ಹಣವೂ ಇಲ್ಲದೇ ಮಹಿಳೆಯರು ಕಂಗಾಲಾಗಿದ್ದಾರೆ. ಹಣಕ್ಕಾಗಿ ಹಲವು ಬಾರಿ ಇಬ್ಬರು ಪುಷ್ಪ ಮತ್ತು ಮೆಹಬೂಬಿಯನ್ನು ಕೇಳಿದ್ದಾರೆ. ಅದಕ್ಕೆ ಇಂದ ನಾಳೆ ಎನ್ನುತ್ತ ಬಂದಿರೋ ಇಬ್ಬರು ಯಾಮಾರಿಸುತ್ತಲೇ ಬಂದಿದ್ದಾರೆ.
ಇಂದು ಇಬ್ಬರು ಒಂದೇ ಕಡೆ ಇರುವುದನ್ನ ತಿಳಿದು ಹಣ ಕೊಟ್ಟ ಮಹಿಳೆಯರೆಲ್ಲರೂ ಪುಷ್ಪ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಈ ವೇಳೆ ಇಬ್ಬರು ಹೊಡೆದಾಡಿಕೊಂಡು ನುಣುಚಿಕೊಳ್ಳುವ ಯತ್ನ ಮಾಡಿದ್ದು, ಮೋಸ ಹೋದ ಮಹಿಳೆಯರು ಹಣ ಕೊಡಲಿಲ್ಲ ಎಂದ್ರೆ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತೇವೆ ಅಂತಾರೆ.
ಇನ್ನು ರೈತರ ಕೊಡುವ ಸಾಲದ ಸೌಲಭ್ಯವನ್ನೇ ದುರ್ಬಳಕೆ ಮಾಡಿಕೊಂಡಿರೋದು ಒಂದು ಕಡೆಯಾದ್ರೆ, ಜಿಲ್ಲೆಯ ರಾಜಕೀಯ ಧುರೀಣರ ಹೆಸರು ಹೇಳಿ, ನಗರದ ಮಹಿಳೆಯರಿಗೆ ಮೋಸ ಮಾಡಿದ್ದಾರೆ.
ಮಹಿಳೆಯರಿಗನ್ನೆ ಗುರಿಯಾಗಿಸಿಕೊಂಡು ಮೋಸ ಮಾಡುವ ಜಾಲವೇ ಹುಬ್ಬಳ್ಳಿಯಲ್ಲಿ ಹರಡಿದ್ಯಾ ಅನ್ನೋ ಅನುಮಾನ ಹುಟ್ಟಿದ್ದು, ಇದೆಲ್ಲದಕ್ಕೂ ಪೊಲೀಸ್ ಇಲಾಖೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕಿದೆ....
PublicNext
12/01/2021 08:13 pm