ಪುಲ್ವಾಮಾ (ಜಮ್ಮು ಕಾಶ್ಮೀರ): ಲಷ್ಕರ್-ಇ-ತೋಯ್ಬಾ ಉಗ್ರರು ಪುಲ್ವಾಮಾದ ಪಾಂಪೋರ್ ಪಟ್ಟಣದಲ್ಲಿ ನಿರ್ಮಿಸಿಕೊಂಡಿದ್ದ ಅಡಗುತಾಣಗಳನ್ನು ಜಮ್ಮು - ಕಾಶ್ಮೀರ ಪೊಲೀಸರು ಭೇದಿಸಿದ್ದಾರೆ. ಅಡಗುತಾಣಗಳ ಮೇಲೆ ದಾಳಿ ಮಾಡಿದ ಪೊಲೀಸರು ಆದಿಲ್ ಅಹಮದ್ ಶಾ ಎಂಬ ಉಗ್ರನನ್ನು ಬಲೆಗೆ ಕೆಡವಿದ್ದಾರೆ.
ಇಲ್ಲಿನ ಚಂಧಾರಾ ಎಂಬ ಗ್ರಾಮದ ಮನೆಯೊಂದರಲ್ಲಿ ಉಗ್ರರ ಅಡಗುತಾಣ ಪತ್ತೆಯಾಗಿದೆ. ಈ ಅಡಗು ಮೇಲೆ ದಾಳಿ ಮಾಡಿದ ಇಲ್ಲಿನ ಆವಂತಿಪುರ ಠಾಣಾ ಪೊಲೀಸರು ಉಗ್ರನನ್ನು ಸೆರೆ ಹಿಡಿದಿದ್ದಾರೆ. ಜಮ್ಮು ಕಾಶ್ಮೀರ ಪೊಲೀಸರಿಗೆ ಸಿಆರ್‌ಪಿಎಫ್ ಕೂಡಾ ಸಾಥ್ ನೀಡಿತ್ತು. ಭಾನುವಾರ ಬೆಳಗ್ಗೆಯೇ ಮನೆ ಮೇಲೆ ದಾಳಿ ನಡೆಸಿದ ಪೊಲೀಸ್ ಪಡೆ, ಮನೆಯನ್ನು ವಶಕ್ಕೆ ತೆಗೆದುಕೊಂಡು ಸಮಗ್ರ ಹುಡುಕಾಟ ನಡೆಸಿತು. ಈ ವೇಳೆ, 6 ಅಡಿ ಉದ್ದದ ಸುರಂಗ ಪತ್ತೆಯಾಯ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸುರಂಗ ಕಾಣದಂತೆ ಅದರ ಮಾರ್ಗದ ಮೇಲೆ ಹೊದಿಕೆ ಇಡಲಾಗಿತ್ತು ಎಂಬುದು ತಿಳಿದು ಬಂದಿದೆ.
PublicNext
10/01/2021 09:22 pm