ಗುಂಟೂರು: ಟಿಡಿಪಿ ನಾಯಕನ ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ.
ಗುಂಟೂರು ಜಿಲ್ಲೆಯ ಪಲ್ನಾಡಿಯಲ್ಲಿ ತೆಲುಗುದೇಶಂ ಪಕ್ಷದ ಮುಖಂಡ ಹಾಗೂ ದಾಚೆಪಲ್ಲಿ ಮಂಡಲದ ಮಾಜಿ ಸರ್ಪಂಚ್ ಪುರನ್ಸೆಟ್ಟಿ ಅಂಕುಲು ಅವರನ್ನು ದುಷ್ಕರ್ಮಿಗಳು ಭೀಕರವಾಗಿ ಕೊಲೆಗೈದಿದ್ದಾರೆ.
ತಡರಾತ್ರಿ ಅವರ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳು ಅವರ ಕತ್ತು ಸೀಳಿ ಹತ್ಯೆ ಮಾಡಿದ್ದಾರೆ.
ಈ ಹತ್ಯೆ ಹಿಂದೆ ರಾಜಕೀಯ ವೈಷಮ್ಯದ ಶಂಕೆ ಎದುರಾಗಿದ್ದು, ಈ ಹತ್ಯೆ ಇದೀಗ ಇಡೀ ಗುಂಟೂರು ಜಿಲ್ಲೆಯನ್ನು ಬೆಚ್ಚಿ ಬೀಳಿಸಿದೆ.
ಘಟನಾ ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಸಿದ್ದು, ಪ್ರಾಥಮಿಕ ತನಿಖೆ ನಡೆಸಿದರು.
ತನಿಖೆ ನಡೆಸಿ ಸತ್ಯಾಂಶ ಹೊರಗೆಳೆಯುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇನ್ನು ಪುರನ್ ಸೆಟ್ಟಿ ಅಂಕುಲು ಅವರ ಅಂತ್ಯಕ್ರಿಯೆಗೆ ಟಿಡಿಪಿ ಮುಖಂಡ ಹಾಗೂ ಆಂಧ್ರ ಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಪಾಲ್ಗೊಳ್ಳಲ್ಲಿದ್ದಾರೆ ಎಂದು ತಿಳಿದುಬಂದಿದೆ.
PublicNext
04/01/2021 08:51 am