ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೋದಿಗೆ ಪತ್ರ ಬರೆದು ಕುಣಿಕೆಗೆ ಕೊರಳೊಡ್ಡಿದ ಯುವಕ : ಡೆತ್ ನೋಟ್ ನಲ್ಲಿ ಏನಿದೆ?

ಭೋಪಾಲ್: ಡೆಡ್ಲಿ ಸೋಂಕು ವಕ್ಕರಿಸಿದ ಮೇಲೆ ಅನೇಕರ ಬಾಳು ಅಂಧಕಾರವಾಗಿದೆ. ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರ ಲಾಕ್ ಡೌನ್ ಜಾರಿ ಮಾಡಿತ್ತು.

ಇದರಿಂದ ಜನಜೀವನ ಕಂಡರಿಯದ ರೀತಿಯಲ್ಲಿ ಬದಲಾಗಿ ಹೋಗಿದೆ. ಈ ವೇಳೆ ಜನ ಪಟ್ಟ ಪಾಡು ಮರೆಯುವಂತಿಲ್ಲ.

ಸದ್ಯ ಈ ಸಂಕಷ್ಟದಿಂದ ಸುಧಾರಿಸಿಕೊಳ್ಳಲಾಗದೇ ಅನೇಕರು ಪ್ರಾಣ ಕಳೆದುಕೊಳ್ಳುವ ಹಂತ ತಲುಪುತ್ತಿದ್ದಾರೆ.

ಹೌದು ಯುವಕನೊಬ್ಬ ಪ್ರಧಾನಿಗೆ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶ ಛತರ್ ಪುರದಲ್ಲಿ ನಡೆದಿದೆ.

ಕಿರಾಣಿ ಅಂಗಡಿ ನಡೆಸುತ್ತಿದ್ದ ಮುನೇಂದ್ರ ರಾಜ್ ಪುತ್ ಎಂಬ ಯುವಕ.

ಕೊರೊನಾ ಸಂಕಷ್ಟದ ಸಮಯದಲ್ಲಿ ವ್ಯಾಪಾರದಲ್ಲಾದ ನಷ್ಟದಿಂದಾಗಿ ವಿದ್ಯುತ್ ಬಿಲ್ ಕಟ್ಟಿರಲಿಲ್ಲ. ಬಿಲ್ ನ ಮೊತ್ತ 80,000 ಸಾವಿರ ರೂಪಾಯಿಗೆ ಏರುತ್ತಲೇ ಅಧಿಕಾರಿಗಳು ವಿದ್ಯುತ್ ಕಟ್ ಮಾಡಿದ್ದಾರೆ.

ಇದರಿಂದ ಯುವಕನ ಅಂಗಡಿ ಮುಚ್ಚಲ್ಪಟ್ಟಿತ್ತು ಈ ಅವಮಾನ ತಾಳದೆ ಮೋದಿಯವರಿಗೆ ಏಳು ಪುಟಗಳ ಡೆತ್ ನೋಟ್ ಬರೆದಿಟ್ಟು ಕುಣಿಕೆ ಕೊರಳೊಡ್ಡಿದ್ದಾನೆ.

ಈತ ಡೆತ್ ನೋಟ್ ನ ಲ್ಲಿ ಮೋದಿಯವರೇ ನಾನು ನಿಮ್ಮ ಮೇಲೆ ಅಪಾರವಾದ ಪ್ರೀತಿ ಹಾಗೂ ಗೌರವನ್ನು ಹೊಂದಿದ್ದೇನೆ. ಆದರೆ ಆಡಳಿತದಲ್ಲಿರುವ ಕೆಳಹಂತದ ಅಧಿಕಾರಿಗಳು ಬಡವರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದಾರೆ.

ನಾನು ವಿದ್ಯುತ್ ನಿಗಮ ನೀಡುತ್ತಿದ್ದ ಹಿಂಸೆಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ.

ನನ್ನ ದೇಹದ ಅಂಗಾಂಗಗಳನ್ನು ಮಾರಾಟ ಮಾಡಿ ಅವರ ಬಿಲ್ ಪೂರೈಸಿಕೊಳ್ಳುವಂತೆ ಪತ್ರದಲ್ಲಿ ಬರೆದುಕೊಂಡಿದ್ದಾನೆ.

ಆತ್ಮಹತ್ಯೆ ಮಾಡಿಕೊಂಡ ಯುವಕನ ಸಹೋದರ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Edited By : Nirmala Aralikatti
PublicNext

PublicNext

01/01/2021 12:48 pm

Cinque Terre

93.9 K

Cinque Terre

20