ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ 12 ಗಂಟೆಯಿಂದಲೇ 144 ಸೆಕ್ಷನ್ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮದ್ಯದ ಅಂಗಡಿಗಳು ಕೂಡ ಬಂದ್ ಆಗಲಿವೆ. ಹೀಗಾಗಿ ಬೆಂಗಳೂರಿನ ರಾಜಾಜಿನಗರದ 61 ವರ್ಷದ ರಿಯಲ್ ಎಸ್ಟೇಟ್ ಏಜೆಂಟರ್ ಒಬ್ಬರು ತಮ್ಮ ಮನೆಯಲ್ಲಿ ಅನುಮತಿ ಮಿತಿಗಿಂತ 20 ಪಟ್ಟು 85 ಲೀ. ಮದ್ಯವನ್ನು ಸಂಗ್ರಹಿಸಿ ಸಿಕ್ಕಿಬಿದ್ದಿದ್ದಾರೆ.
ಆರೋಪಿಯನ್ನು ಪೊಲೀಸರು ಬಂಧಿಸಿದ್ದು ತಲಾ 750 ಮಿ.ಲೀ. ಇರುವ ಒಟ್ಟು 114 ಬಾಟಲಿಗಳ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯು ಅಧಿಕಾರಿಯೊಬ್ಬರ ಸಹಾಯದಿಂದ ವಾಯುಪಡೆಯ ಕ್ಯಾಂಟೀನ್‌ನಿಂದ ಮದ್ಯವನ್ನು ಖರೀದಿಸಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
PublicNext
31/12/2020 04:16 pm