ಮೆಕ್ಸಿಕೊ: ವಿವಾಹಿತ ವ್ಯಕ್ತಿಯೊಬ್ಬ ತನ್ನ ಗೆಳತಿಯ ಮನೆಗೆ ಸುರಂಗವನ್ನು ಕೊರೆದು ಆಕೆಯ ಗಂಡನ ಕೈಗೆ ಸಿಕ್ಕಿಹಾಕಿಕೊಂಡ ಪ್ರಸಂಗವೊಂದು ಉತ್ತರ ಅಮೆರಿಕದ ಮೆಕ್ಸಿಕೊದಲ್ಲಿ ನಡೆದಿದೆ.
ಆರೋಪಿಯು ತನ್ನ ಮನೆಯಿಂದ ಪ್ರೇಯಸಿ ಮನೆವರೆಗೂ ಸುರಂಗವನ್ನು ಕೊರೆದಿದ್ದಾನೆ. ಈ ಮೂಲಕ ಗೆಳತಿಯ ಮನೆಗೆ ಬಂದು ಏಕಾಂತದ ಕಾಲ ಕಳೆಯುತ್ತಿದ್ದ. ಆದರೆ ಮಹಿಳೆಯ ಪತಿ ಕೆಲಸದಿಂದ ಬೇಗ ಮನೆಗೆ ಬಂದಾಗ ಪತ್ನಿ ತನ್ನ ಗೆಳೆಯನ ಜೊತೆಗೆ ಏಕಾಂತದಲ್ಲಿ ಇರುವುದನ್ನು ನೋಡಿದ್ದಾನೆ. ಆದರೆ ಇನ್ನೇನು ಹಿಡಿಯಬೇಕು ಎನ್ನುವಷ್ಟರಲ್ಲಿ ಆರೋಪಿ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದಾನೆ. ಹೀಗಾಗಿ ಮಹಿಳೆಯ ಪತಿ ಆ ವ್ಯಕ್ತಿಯ ಹುಡುಕಾಡುತ್ತಿದ್ದಾಗ ಮಂಚದ ಬಳಿ ಸುರಂಗ ನೋಡಿದ್ದಾನೆ. ಅದೇ ಸುರಂಗದ ಮೂಲಕ ಹೋಗಿ ಆರೋಪಿಯನ್ನು ಪತ್ತೆಹಚ್ಚಿದ್ದಾನೆ.
PublicNext
31/12/2020 07:50 am