ಮುಂಬೈ: ಬಹು ಕಾರು ನೋಂದಣಿ ದಂಧೆಗೆ ಸಂಬಂಧಿಸಿದ ಮೋಸ ಮತ್ತು ಖೋಟಾ ಪ್ರಕರಣದಲ್ಲಿ ಮುಂಬೈ ಪೊಲೀಸರು ಭಾರತದ ಐಷಾರಾಮಿ ಕಾರು ವಿನ್ಯಾಸಕ, ‘ಡಿಸಿ ಡಿಸೈನ್’ ಸಂಸ್ಥಾಪಕ ದಿಲೀಪ್ ಚಾಬ್ರಿಯಾ ಅವರನ್ನು ಸೋಮವಾರ ಬಂಧಿಸಿದ್ದಾರೆ. ಜೊತೆಗೆ ಇಂದರ್ಮಾಲ್ ರಮಣಿ ಹೆಸರಿನಲ್ಲಿ ತಮಿಳುನಾಡು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೋಂದಾಯಿಸಲಾಗಿರುವ ಸುಮಾರು 75 ಲಕ್ಷ ರೂಪಾಯಿ ಮೌಲ್ಯದ ಹಿಘೆಂಡ್ ಸ್ಪೋರ್ಟ್ಸ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಡಿಸಿ ಡಿಸೈನ್ ಕಂಪನಿ ಭಾರತದಲ್ಲಿ ಅತ್ಯಂತ ಜನಪ್ರೀಯವಾಗಿದೆ. ಬಾಲಿವುಡ್ ಸೇರಿದಂತೆ ಭಾರತೀಯ ಚಿತ್ರರಂಗದ ಸೆಲೆಬ್ರೆಟಿಗಳ ಕಾರವಾನ್, ವ್ಯಾನಿಟಿ ವ್ಯಾನ್ ಸೇರಿದಂತೆ ಐಷಾರಾಮಿ ಕಾರುಗಳನ್ನು ಮಾಡಿಫಿಕೇಶನ್ ಮಾಡಿದ ಹೆಗ್ಗಳಿಗೆ ಡಿಸಿ ಡಿಸೈನ್ ಕಂಪನಿಗೆ ಇದೆ. ಆದರೆ ಇದೀಗ ವಂಚನೆ ಪ್ರಕರಣ ದಾಖಲಾಗಿ ಸಂಕಷ್ಟಕ್ಕೆ ಸಿಲುಕಿದೆ.
PublicNext
29/12/2020 03:52 pm