ಬಳ್ಳಾರಿ: ಚರ್ಚ್‌ನ 50 ವರ್ಷದ ಫಾಸ್ಟರ್ ಜೊತೆ ಯುವತಿ ನಾಪತ್ತೆಯಾಗಿರುವ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಚರ್ಚ್ ಫಾಸ್ಟರ್ ರವಿಕುಮಾರ್ ತಮ್ಮ ಪುತ್ರಿ ಶ್ವೇತಾ ಕಿಡ್ನಾಪ್ ಮಾಡಿರುವುದಾಗಿ ಯುವತಿಯ ಪೋಷಕರು ಡಿಸೆಂಬರ್ 16ರಂದು ಠಾಣೆಗೆ ದೂರು ನೀಡಿದ್ದರು. ಇದೀಗ ಯುವತಿಯು ಸೆಲ್ಪಿ ವಿಡಿಯೋ ಮೂಲಕ ಕೆಲ ವಿಚಾರಗಳನ್ನು ಬಹಿರಂಗಪಡಿಸಿದ್ದಾಳೆ.
ಯುವತಿ ಶ್ವೇತಾ ಕಳುಹಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ''ನಾನು ಚರ್ಚ್ಗೆ ಹೋಗುವುದು ಪೋಷಕರಿಗೆ ಇಷ್ಟವಿರಲಿಲ್ಲ. ಪೋಷಕರು ನನ್ನ ಮತ್ತು ರವಿಕುಮಾರ್ ಮಧ್ಯೆ ಸಂಬಂಧ ಕಲ್ಪಿಸಿದ್ದರು. ಹೀಗಾಗಿ ಜನರು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಲು ಆರಂಭಿಸಿದರು. ಇದರಿಂದಾಗಿ ನಾನು ಫಾಸ್ಟರ್ ಜೊತೆಗೆ ಮದುವೆಯಾಗಲು ಮುಂದಾಗಿ ಅವರನ್ನು ಒತ್ತಾಯಿಸಿದೆ. ಆದರೆ ಇದೀಗ ರವಿಕುಮಾರ್ ನನ್ನನ್ನು ಕಿಡ್ನಾಪ್ ಮಾಡಿರುವುದಾಗಿ ದೂರು ನೀಡಿದ್ದಾರೆ. ಪೋಷಕರು ಹೇಳಿರುವುದು ಸುಳ್ಳು. ನಾನು ಸ್ವ-ಇಚ್ಛೆಯಿಂದ ರವಿಕುಮಾರ್ನೊಂದಿಗೆ ಮದುವೆಯಾಗಿದ್ದೇನೆ'' ಎಂದು ಶ್ವೇತಾ ಹೇಳಿದ್ದಾಳೆ.
ನಾನು ನನ್ನಿಷ್ಟದಂತೆ ಚರ್ಚ್ ಫಾಸ್ಟರ್ ರವಿಕುಮಾರ್ ಜೊತೆ ಬಂದಿದ್ದೇನೆ. ಇಬ್ಬರೂ ಸೇರಿ ಮದುವೆಯಾಗಿದ್ದೇವೆ. ರವಿ ಕುಮಾರ್ಗೆ ನನ್ನ ಪೋಷಕರು ಜೀವ ಬೆದರಿಕೆ ಒಡ್ಡುತ್ತಿದ್ದಾರೆ. ನಮಗೆ ರಕ್ಷಣೆ ನೀಡಿ ಎಂದು ವಿಡಿಯೋದಲ್ಲಿ ಶ್ವೇತಾ ಮನವಿ ಮಾಡಿಕೊಂಡಿದ್ದಾಳೆ.
PublicNext
29/12/2020 02:40 pm