ನವದೆಹಲಿ: ಹೊಸ ವರ್ಷದ ಪಾರ್ಟಿ ಮಾಡಲು ಹಣ ಕೊಡದ ಕಾರಣಕ್ಕೆ 19 ವರ್ಷದ ಯುವಕ ತನ್ನ 73 ವರ್ಷದ ಅಜ್ಜಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದಿದ್ದಾನೆ.
ನವದೆಹಲಿಯ ರೋಹ್ತಾಶ್ ನಗರದಲ್ಲಿ ಈ ಘಟನೆ ನಡೆದಿದೆ. ಕರಣ್ ಎಂಬಾತನೇ ಕೊಲೆಗೈದ ಆರೋಪಿ. ಪಕ್ಕದ ಮನೆಯ ಶಹದಾರಾ ಎಂಬುವವರು ಪೊಲೀಸರಿಗೆ ಕರೆ ಮಾಡಿ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಅಜ್ಜಿ ಸತೀಶ್ ಜಾಲಿಯವರ ಮೃತ ದೇಹದ ಸುತ್ತಲಿನ ಜಾಗ ಪರಿಶೀಲಿಸಿದ್ದಾರೆ. ಶವದ ಪಕ್ಕದಲ್ಲೇ ರಕ್ತದ ಕಲೆಗಳಿಂದ ಕೂಡಿದ್ದ ಸುತ್ತಿಗೆ ಕಂಡು ಬಂದಿದೆ.
ಆರೋಪಿ ಕರಣ್ ಕೊಲೆಯಾದ ಸತೀಶ್ ಜಾಲಿ ಅವರ ಹಿರಿಯ ಮಗನ ಮಗನಾಗಿದ್ದು ಕಳೆದ ಶನಿವಾರ ರಾತ್ರಿ ಹಣ ಕೊಡುವಂತೆ ಅಜ್ಜಿಯನ್ನು ಪೀಡಿಸಿದ್ದಾನೆ. ಅಜ್ಜಿ ಹಣ ಕೊಡದಿದ್ದಕ್ಕೆ ಕುಪಿತಗೊಂಡ ಮೊಮ್ಮಗ ಕರಣ್ ಸುತ್ತಿಗೆಯಿಂದ ಅಜ್ಜಿಯ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿದ್ದಾನೆ.
ನಂತರ ಮನೆಯಲ್ಲಿದ್ದ 18 ಸಾವಿರ ನಗದು ದೋಚಿಕೊಂಡು ಪರಾರಿಯಾಗಿದ್ದನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಪತ್ತೆಯಾಗಿದ್ದ ಆರೋಪಿ ಕರಣ್ ನನ್ನು ಅರೆಸ್ಟ್ ಮಾಡಿದ್ದಾರೆ.
PublicNext
29/12/2020 02:24 pm