ಜೈಪುರ್: ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 28 ವರ್ಷದ ಯುವಕನನ್ನು ಥಳಿಸಿ ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಘಟನೆ ರಾಜಸ್ಥಾನದ ಜಾಲಾವರ್‌ನಲ್ಲಿ ನಡೆದಿದೆ.
ರಾಕೇಶ್ ಹಲ್ಲೆಗೆ ಒಳಗಾದ ಯುವಕ. ರಾಕೇಶ್ ಹಾಗೂ ಆತನ ಮೇಲೆ ಹಲ್ಲೆ ನಡೆಸಿದ 8 ಮಂದಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದೆ.
ಪೊಲೀಸರ ಮಾಹಿತಿ ಪ್ರಕಾರ, ಸಂತ್ರಸ್ತ ಮಹಿಳೆಯ ಜೊತೆಗೆ ರಾಕೇಶ್ ಇರುವುದನ್ನು ಆಕೆಯ ಪತಿಯ ಸ್ನೇಹಿತರು ನೋಡಿದ್ದರು. ಈ ವೇಳೆ ರಾಕೇಶ್ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಷ್ಟೇ ಅಲ್ಲದೆ ರಾಕೇಶ್‌ನನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ್ದಾರೆ.
PublicNext
28/12/2020 05:46 pm