ಬೆಂಗಳೂರು- ನಗರದ ಮರಿಯಮ್ಮನ ಪಾಳ್ಯದಲ್ಲಿ ವಿವಾಹಿತೆಗೆ ಒತ್ತಾಯವಾಗಿ ವಿಷ ಕುಡಿಸಿ ಕೊಲೆಗೆ ಯತ್ನಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಸಹಾಯಕ ಪ್ರಾಧ್ಯಾಪಕಿಯಾಗಿರುವ ಪಾವನ ಎಂಬುವವರೇ ಸಂತ್ರಸ್ಥೆ. ಪಾವನ ಅವರನ್ನ ಪತಿ ಪ್ರದೀಪ್, ಅತ್ತೆ, ಮಾವ ಹಾಗೂ ನಾದಿನಿ ಕೊಲೆ ಮಾಡಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಗಂಡನ ಮನೆಯವರೇ ವಿಷ ಕುಡಿಸಿ ಸಾಯಿಸಲು ಪ್ರಯತ್ನಿಸಿದ್ದಾರೆ ಎಂದು ಪಾವನ ಅವರ ಕುಟುಂಬಸ್ಥರು ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇತ್ತೀಚೆಗಷ್ಟೇ ಪಾವನ ಹಾಗೂ ಪ್ರದೀಪ್ ಅವರ ಮದುವೆಯಾಗಿತ್ತು. ಪಾವನ ಬೆಂಗಳೂರಿನ ನರ್ಸಿಂಗ್ ಕಾಲೇಜೊಂದರಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡ್ತಿದ್ದಾರೆ. ಪತಿ ಪ್ರದೀಪ್ ಫ್ಯಾಮಿಲಿ ಕೋರ್ಟ್ ನಲ್ಲಿ ಶಿರಸ್ತೇದಾರ್ ಆಗಿದ್ದಾನೆ. ಸ್ವಲ್ಪ ದಿನಗಳ ಹಿಂದೆ ದಂಪತಿ ನಡುವೆ ಜಗಳವಾಗಿದೆ. ಇದೇ ಕಾರಣಕ್ಕೆ ಪಾವನ ಮನೆ ಬಿಟ್ಟು ಹೋಗಿದ್ದರು ಎನ್ನಲಾಗಿದೆ. 15 ದಿನಗಳ ಒಳಗಾಗಿ ಮನೆಗೆ ವಾಪಸ್ ಬರಬೇಕೆಂದು ಪ್ರದೀಪ್ ಪತ್ನಿಗೆ ನೋಟಿಸ್ ಕಳುಹಿಸಿದ್ದ. ಅದರಂತೆ ನಿನ್ನೆ ಪಾವನ ಪತಿ ಮನೆಗೆ ತೆರಳಿದ್ದಾರೆ.
ಇದೇ ವೇಳೆ ಗಂಡ ಹಾಗೂ ಮನೆಯವರು ಬಲವಂತವಾಗಿ ವಿಷ ಕುಡಿಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ಪಾವನ ಕುಟುಂಬಸ್ಥರು ಆರೋಪಿಸಿದ್ದಾರೆ. ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
28/12/2020 03:05 pm