ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ವಯಂ ಪ್ರೇರಿತರಾಗಿ ಜನರಿಂದ ಟ್ರಾಫಿಕ್​ ನಿಯಂತ್ರಣ: ಖಾಕಿ ದರ್ಪಕ್ಕೆ ಪ್ರತಿಭಟನೆಗೆ ಕುಳಿತ ಸಾರ್ವಜನಿಕರು

ಬೆಂಗಳೂರು: ಸ್ವಯಂ ಪ್ರೇರಿತರಾಗಿ ಟ್ರಾಫಿಕ್​ ನಿಯಂತ್ರಿಸಿದ ಜನರ ಮೇಲೆಯೇ ಸಬ್ ಇನ್‌ಸ್ಪೆಕ್ಟರ್ ಅವಾಚ್ಯ ಶಬ್ದಗಳಿಂದ ನಿಂದಿಸಿ ದರ್ಪ ಮೆರೆದ ಘಟನೆ ಬೆಂಗಳೂರಿನ ವಿಜಯನಗರದ ವಿದ್ಯಾರಣ್ಯನಗರದಲ್ಲಿ ನಡೆದಿದೆ.

ಕೆಂಪಪುರ ಅಗ್ರಹಾರದ ರವಿ ಮಡಿವಾಳ ಸಾರ್ವಜನಿಕರ ಮೇಲೆ ದರ್ಪ ತೋರಿದ ಸಬ್ ಇನ್‌ಸ್ಪೆಕ್ಟರ್​. ವಿದ್ಯಾರಣ್ಯನಗರದಲ್ಲಿ ಟ್ರಾಫಿಕ್ ಜಾಮ್ ಆಗಿದ್ದರಿಂದ ಸ್ಥಳೀಯರು ಟ್ರಾಫಿಕ್ ಕಂಟ್ರೋಲ್ ಮಾಡುತ್ತಿದ್ದರು. ಈ ವೇಳೆ ರಾಂಗ್ ರೂಟ್​ನಲ್ಲಿ ಬಂದ ರವಿ ಮಡಿವಾಳ ಸಾರ್ವಜನಿಕರ ಮೇಲೆ ದರ್ಪ ತೋರಿದ್ದಾರೆ. ಟ್ರಾಫಿಕ್​ ನಿಯಂತ್ರಿಸುತ್ತಿದ್ದ ಜನರ ಬಳಿ ಬಂದ ಎಸ್​ಐ, 'ನೀನ್ ಯಾರ್ ಟ್ರಾಫಿಕ್ ಕಂಟ್ರೋಲ್ ಮಾಡುವುದಕ್ಕೆ? ಐಡಿ ತೋರಿಸು ಎಂದು ಆವಾಜ್ ಹಾಕಿದ್ದಾರೆ.

ಸಬ್ ಇನ್‌ಸ್ಪೆಕ್ಟರ್ ರವಿ ಮಡಿವಾಳ ವರ್ತನೆಯಿಂದ ಕೋಪಗೊಂಡ ಸಾರ್ವಜನಿಕರು ರಸ್ತೆಯಲ್ಲಿ ಪ್ರತಿಭಟನೆಗೆ ಇಳಿದು ಆಕ್ರೋಶ ಹೊರಹಾಕಿದರು. ಅಷ್ಟೇ ಅಲ್ಲದೆ ನಮಗೆ ಇಂತಹ ಪೊಲೀಸರು ಬೇಡ, ವರ್ಗಾವಣೆ ಮಾಡಿ ಎಂದು ಅಳಲನ್ನು ತೋಡಿಕೊಂಡಿದ್ದಾರೆ.

Edited By : Vijay Kumar
PublicNext

PublicNext

26/12/2020 12:30 pm

Cinque Terre

72.74 K

Cinque Terre

3