ಹುಬ್ಬಳ್ಳಿ: ಕಡಿಮೆ ಬೆಲೆಗೆ ಬಂಗಾರ ಕೊಡಿಸುವುದಾಗಿ ಹೇಳಿ, ಎಂಟು ತಿಂಗಳ ಹಿಂದೆ ಇಬ್ಬರ ಮೇಲೆ ಹಲ್ಲೆ ನಡೆಸಿ 5.54 ಲಕ್ಷ ದರೋಡೆ ಮಾಡಿದ್ದ ಘಟನೆಗೆ ಸಂಬಂಧಿಸಿದಂತೆ ಆರು ಮಂದಿಯನ್ನು ಆರೋಪಿಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ದಾಸನಕೊಪ್ಪದ ಪ್ರಶಾಂತ ಕೊರಚರ (26), ಪ್ರವೀಣ ಕೊರಚರ (30), ಅನೀಲ ಕೊರಚರ (25), ಪರಮೇಶಕುಮಾರ ಕೊರಚರ (27), ಅರುಣ ಕೊರಚರ (26), ಹರಪ್ಪನಹಳ್ಳಿ ತಾಲ್ಲೂಕಿನ ಯಲ್ಲಾಪುರದ ಮಾರುತಿ ಜಿ.ಎಸ್.(28) ಬಂಧಿತರು. ದರೋಡೆ ಹಣದಿಂದ ಆರೋಪಿಗಳು ಖರೀದಿಸಿದ್ದ ಕಾರು, ಬೈಕ್, ಬಂಗಾರ ಹಾಗೂ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದರು.
PublicNext
03/10/2020 09:09 am