ಪುಣೆ : ಇತ್ತಿಚಿಗೆ ಸಾಮಾಜಿಕ ಜಾಲತಾಣಗಳು ಸಖತ್ ಆಕ್ಟೀವ್ ಆಗಿದೆ ದಿನಕ್ಕೊಂದು ಹೊಸ ಚಾಲೇಂಜ್ ಮಾಡ್ಕೊಂಡು ಖುಷೀ ಪಡೋರ ಸಂಖ್ಯೆ ವ್ಯಾಪಕವಾಗಿ ಹಬ್ಬುತ್ತಿದೆ.
ಈ ಸರದಿಗೆ ಫೇಸ್ಬುಕ್ ಕಪಲ್ ಚಾಲೆಂಜ್, ಸಿಂಗಲ್ ಚಾಲೆಂಜ್, ಫ್ಯಾಮಿಲಿ ಚಾಲೆಂಜ್ ಎಂಬ ಟ್ರೆಂಡ್ಗಳು ಶುರುವಾಗಿ ತಾವು ಒಂಟಿಯಾಗಿರುವ, ಸಂಗಾತಿ ಜತೆಗಿರುವ, ಕುಟುಂಬದ ಜತೆಗಿರುವ ಫೋಟೋಗಳನ್ನು ಅಪ್ಲೋಡ್ ಮಾಡಲಾಗುತ್ತಿದೆ. ಇದಾಗಲೇ ಲಕ್ಷಾಂತರ ಮಂದಿ ತಮ್ಮ ಫೋಟೋಗಳನ್ನು ಅಪ್ಲೋಡ್ ಮಾಡಿ ಖುಷ್ ಆಗಿದ್ದಾರೆ.
ಆದ್ರೆ ಈ ಚಾಲೆಂಜ್ ಹೆಸರಿನಲ್ಲಿ ಆಗಿರುವ ಅನಾಹುತದ ನಿಜಾಂಶವನ್ನು ಪುಣೆ ಪೊಲೀಸರು ಪತ್ತೆ ಹಚ್ಚಿ ಟ್ವೀಟರ್ ಮೂಲಕ ಮಾಹಿತಿ ಹಂಚಿಕೊಂಡು ದಯವಿಟ್ಟು ಇಂಥ ಚಾಲೆಂಜ್ಗಳನ್ನು ಸ್ವೀಕರಿಸುವ ಮುನ್ನ ಬಹಳ ಜಾಗೃತೆ ವಹಿಸಿ ಎಂದಿದ್ದಾರೆ.
ಕಪಲ್ ಚಾಲೆಂಜ್ನಲ್ಲಿ ಹಾಕಿರುವ ಫೋಟೋಗಳನ್ನು ಪೋರ್ನ್ ವೆಬ್ ಸೈಟ್ ಗೆ ಅಫ್ಲೋಡ್ ಮಾಡಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್ ಮಾಡುವ ಮುಂಚೆ ಯೋಚಿಸಿ ಎಂದು ಟ್ವಿಟ್ಟರ್ ಖಾತೆಯ ಮೂಲಕ ಜನರಲ್ಲಿ ಮನವಿ ಮಾಡಿದ್ದು ಈಗಾಗಲೇ ಈ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ಬಂದಿರುವ ಕಂಪ್ಲೇಂಟ್ ಗಳ ತನಿಖೆ ನಡೆಸುತ್ತಿದ್ದಾರೆ.
PublicNext
27/09/2020 01:00 pm