ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂದಿರ ಮಸೀದಿಯಾಗಿ ರೂಪಾಂತರ!: ಸುಮ್ಮನಿದೆ ಪಿಣರಾಯಿ ಸರ್ಕಾರ

ಕೇರಳ : ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಟಾಯ್ಲೆಟ್ ಜಾಗದಲ್ಲಿ ಅನಧಿಕೃತವಾಗಿ ಮಸೀದಿಯೊಂದು ತಲೆ ಎತ್ತಿತ್ತು.

ಈ ಬಗ್ಗೆ Public Next EXCLUSIVE ವರದಿ ಮಾಡಿತ್ತು. ನಮ್ಮ Public Next ವರದಿಯಿಂದ ಎಚ್ಚೆತ್ತ ರೈಲ್ವೆ ಇಲಾಖೆ ಕೂಡಲೇ ಅನಧಿಕೃತ ಮಸೀದಿಯನ್ನ ಮುಚ್ಚಿಸಿತ್ತು. ಇದೀಗ ಮೇಲಿನ ಸುದ್ದಿಗೆ ಸಮಾನವಾದ ಸುದ್ದಿ ಕೇರಳದಲ್ಲಿ ನಡೆದಿದೆ.

ಪುರಾತನ ದೇವಾಲಯಕ್ಕೆ ಹೊಂದಿಕೊಂಡ ಕಲ್ಯಾಣಿ, ಕಲ್ಯಾಣಿಯ ನೀರಿನಲ್ಲಿ ಮೀನು ಮತ್ತು ಕೊಳಕ್ಕೆ ಹೊಂದಿಕೊಂಡ ಬೃಹದಾಕಾರದ ಮಂಟಪ. ಮಂಟಪದ ಒಳಗೆ ಮರದ ಕೆತ್ತನೆಯಲ್ಲಿ ಮೂಡಿರುವ ಚಿತ್ತಾರಗಳು ಅತ್ಯದ್ಭುತ.

ಹಿಂದೂಧಾರ್ಮಿಕ ಕೇಂದ್ರವೊಂದು ಮುಸ್ಲಿಂರ ಮಸೀದಿಯಾಗಿ ಮಾರ್ಪಾಟಾಗಿದೆ. ಮಂದಿರದಲ್ಲಿ ತಲೆಗೆ ಟೋಪಿ ಹಾಕಿಕೊಂಡ ಜನ. ಮಂದಿರದೊಳಗೆ ನಮಾಜ್ ಮಾಡುತ್ತಿರುವುದು ಅಚ್ಚರಿಕೆ ಕಾರಣವಾಗಿದೆ.

ಸದ್ಯ ಹಿಂದೂ ದೇವಾಲಯ ಮಸೀದಿಯಾಗಿದ್ದರಿಂದ ಹಿಂದೂ ಸಮಾಜದಿಂದ ಅನೇಕ ಹೋರಾಟಗಳು ನಡೆದಿವೆ. ಆದರೂ ಕೇರಳದ ಪಿಣರಾಯಿ ವಿಜಯ್ ರವರ ಕಣ್ಣು, ಕಿವಿಗೆ ಈ ದುರಂತ ಬಿದ್ದಿಲ್ಲವಾ ಎನ್ನುವುದೇ ಯಕ್ಷ ಪ್ರಶ್ನೆ.

Edited By : Shivu K
PublicNext

PublicNext

13/04/2022 09:58 am

Cinque Terre

53.58 K

Cinque Terre

25