ಮಾಟ-ಮಂತ್ರದ ಚೌಡಿ ಮೇಲೆ ಕಾಲನ್ನಿಟ್ಟು ವ್ಯಕ್ತಿಯೊಬ್ಬ ತುಳಿದ ಪ್ರಸಂಗ ಜಿಲ್ಲೆಯ ಕಡೂರಿನಲ್ಲಿ ನಡೆದಿದೆ.ಚೌಡಿ ಮೇಲೆ ಕಾಲು ಇಟ್ಟಿದ್ದೇವೆ, ಚೌಡಿ ನಮ್ಮ ಮನೆಗೆ ಬರಲಿ ಮಾಟ-ಮಂತ್ರ, ಚೌಡಿ ಅನ್ನೋದೆಲ್ಲಾ ಸುಳ್ಳು, ಯಾರೂ ನಂಬಬೇಡಿ ಎಂದು ಮಂಜುನಾಥ್, ರಾಜು ಊರವರ ಮುಂದೆ ಹೈ ಡ್ರಾಮ ಮಾಡಿದ್ದಾರೆ.
ಕಾಡುಹಂದಿ ಮುಳ್ಳು, ವಿಭೂತಿ, ಬಾಳೆಹಣ್ಣು, ಮಚ್ಚು, ಪಂಚವಳದ ಲೋಹದಿಂದ ಚೌಡಿಗೆ ಪೂಜೆ ಮಾಡಲಾಗಿತ್ತು .ಪೂಜೆಗೆ ಬಳಸಿದ್ದ
ಬಾಳೆಹಣ್ಣನ್ನ ತಿಂದು, ವಿಭೂತಿ ಧರಿಸಿ, ಹಣ, ತೆಂಗಿನಕಾಯಿಯನ್ನ ಮನೆಗೆ ಕೊಂಡಯ್ದಿದ್ದಾರೆ. ದೆವ್ವ, ಮಾಟ-ಮಂತ್ರ, ಪೀಡೆ-ಪಿಚಾಶಿ ಎಲ್ಲವೂ ಸುಳ್ಳು ಎಂದು ಇಬ್ಬರು ಸೇರಿಕೊಂಡು ಚೌಡಿ ವಸ್ತುಗಳನ್ನು ಬಳಕೆಮಾಡಿದ್ದಾರೆ.
PublicNext
28/10/2021 09:32 am