ಭೋಪಾಲ್: ರಾಮಾಯಣ ಬರೆದ ಮಹರ್ಷಿ ವಾಲ್ಮಿಕಿಯನ್ನು ತಾಲಿಬಾನ್‌ಗಳಿಗೆ ಹೋಲಿಸಿದ ಉರ್ದು ಕವಿ ಮುನ್ನಾವರ್ ರಾನಾ ವಿರುದ್ಧ ಮಧ್ಯಪ್ರದೇಶ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮುನ್ನಾವರ್ ರಾನಾ ಅವರು, "ರಾಮಾಯಣ ಬರೆಯುವ ಮುನ್ನ ವಾಲ್ಮಿಕಿ ಸಾಮಾನ್ಯ ಡಕಾಯಿತನಾಗಿದ್ದ, ನಂತರ ಆತ ತಾಲಿಬಾನಿಗಳಂತೆ ಬದಲಾಗಿದ್ದ" ಎಂದು ಹೇಳಿದ್ದರು. ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ರಾನಾ ಅವರ ಈ ಹೇಳಿಕೆ ಹಿಂದೂಗಳು ಅದರಲ್ಲೂ ವಾಲ್ಮೀಕಿ ಜನಾಂಗದವರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ಬಿಜೆಪಿ ಎಸ್‌ಸಿ ಘಟಕದ ರಾಜ್ಯ ಕಾರ್ಯದರ್ಶಿ ಸುನೀಲ್ ಮಾಳವಿಯಾ ದೂರು ನೀಡಿದ್ದರು. ಸುನೀಲ್ ಮಾಳವಿಯಾ ಹಾಗೂ ವಾಲ್ಮಿಕಿ ಜನಾಂಗದ ಮುಖಂಡರು ನೀಡಿದ ದೂರಿನ ಆಧಾರದ ಮೇಲೆ ಗುನಾ ಪೊಲೀಸರು ಮುನ್ನಾವರ್ ರಾನಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
PublicNext
24/08/2021 01:42 pm