ಹಾಸನ: ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿ ಇತ್ತೀಚೆಗೆ ವರದಿಯಾಗಿದ್ದ ಕೋತಿಗಳ ಹತ್ಯೆ ಪ್ರಕರಣ ಪ್ರಾಣಿ ಪ್ರಿಯರನ್ನು ಕೆರಳಿಸಿತ್ತು. ಪ್ರಕರಣದ ಕುರಿತು ಅರಣ್ಯ ಇಲಾಖೆ-ಪೊಲೀಸ್ ಇಲಾಖೆಯವರು ಜಂಟಿ ತನಿಖೆ ನಡೆಸಿ ದಂಪತಿ ಸೇರಿ ಐವರನ್ನು ಬಂಧಿಸಲಾಗಿದೆ.
ಬಂಧಿತ ದಂಪತಿಯನ್ನು ಮಂಗಗಳನ್ನು ಹಿಡಿಯುವುದಕ್ಕಾಗಿಯೇ ನೇಮಿಸಲಾಗಿತ್ತು. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಜಿಲ್ಲಾಧಿಕಾರಿ ಆರ್. ಗಿರೀಶ್, ಪೊಲೀಸರು ರಾಮು ಯಶೋದ ಎಂಬ ದಂಪತಿಯನ್ನು ಬಂಧಿಸಿದ್ದು, ಬಾಣಾವರದ ನಿವಾಸಿಗಳಾದ ಇವರನ್ನು ಮಂಗಗಳನ್ನು ಹಿಡಿಯುವುದಕ್ಕಾಗಿಯೇ ನೇಮಕ ಮಾಡಲಾಗಿತ್ತು. ಉಗನೆ ಗ್ರಾಮದ ಮಂಜ, ರುದ್ರೇಶ್, ರಾಮಾನುಜ ಅಯ್ಯಂಗಾರ್ ನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
PublicNext
03/08/2021 09:11 am