ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕೋಡಿ: ಶಾಲಾರಂಭದ ಮೊದಲನೇ ದಿನವೇ ಕಚ್ಚಿತು ಹಾವು: ಪ್ರಾಣಾಪಾಯದಿಂದ ಪಾರು

ಚಿಕ್ಕೋಡಿ: ಶಾಲೆ ಪ್ರಾರಂಭವಾದ ದಿನವೇ ಶಾಲಾ ಆವರಣದಲ್ಲಿ ವಿದ್ಯಾರ್ಥಿಗೆ ಹಾವು ಕಚ್ಚಿದೆ. ಈ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಮದಮಕ್ಕನಾಳ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಸರಕಾರಿ ಪ್ರಾಥಮಿಕ ಶಾಲೆಯ 5 ನೇ ತರಗತಿ ವಿದ್ಯಾರ್ಥಿ ಮಲ್ಲಿಕಾರ್ಜುನ ಹರಿಜನ ಎಂಬಾತನೇ ಹಾವು ಕಡಿತಕ್ಕೊಳಗಾದ ವಿದ್ಯಾರ್ಥಿ.

ಕಚ್ಚಿದ ಹಾವನ್ನ ಹುಡುಕಿದ ಸ್ಥಳೀಯರು ಹಾಗೂ ಶಿಕ್ಷಕರು ಅದನ್ನು ಸಾಯಿಸಿದ್ದಾರೆ. ವಿದ್ಯಾರ್ಥಿಯನ್ನು ಹುಕ್ಕೇರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು ವಿಷ ಕಡಿಮೆ ಇರುವ ಹಾವುವಾಗಿದ್ದರಿಂದ ವಿದ್ಯಾರ್ಥಿ ಸಾವಿನ ದವಡೆಯಿಂದ ಪಾರಾಗಿದ್ದಾನೆ. ಹುಕ್ಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Edited By : Nagaraj Tulugeri
PublicNext

PublicNext

26/10/2021 07:42 pm

Cinque Terre

37.12 K

Cinque Terre

1