ಬೆಗುಸರಾಯ್: ರೈಲು ಕಿಟಕಿಯಲ್ಲಿ ಕೈ ಹಾಕಿ ಕಳ್ಳತನ ಮಾಡಲು ಯತ್ನಿಸಿದ ಕಳ್ಳನನ್ನು ಪ್ರಯಾಣಿಕರು ಕಿಟಕಿಯಿಂದಲೇ ಆತನನ್ನು ನೇತಾಕಿಸಿದ್ದಾರೆ. ಇದೇ ವೇಳೆ ರೈಲು ಮುಂದೆ ಚಲಿಸಿದೆ.
ಬಿಹಾರದ ಬೆಗುಸರಾಯ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಈತ ರೈಲಿನ ಕಿಟಕಿಯಲ್ಲಿ ಕೈ ಹಾಕಿ ಮೊಬೈಲ್ ಫೋನ್ ಕದಿಯಲು ಯತ್ನಿಸಿದ್ದ ಎನ್ನಲಾಗಿದೆ. ಇದನ್ನು ಗಮಿನಿಸಿದ ಪ್ರಯಾಣಿಕರು ಆತನ ಎರಡೂ ಕೈ ಹಿಡಿದು ಕಿಟಕಿಯಲ್ಲೇ ನೇತಾಡುವಂತೆ ಮಾಡಿದ್ದಾರೆ. ಇದೇ ವೇಳೆ ರೈಲು ಚಲಿಸಲು ಆರಂಭಿಸಿದೆ. ಆಗ ಕಳ್ಳ ಪ್ರಾಣಭೀತಿಯಿಂದ ತನ್ನ ಕೈ ಬಿಡಬೇಡಿ ಎಂದು ಅಂಗಲಾಚಿದ್ದಾನೆ.
PublicNext
15/09/2022 09:10 pm